ಕಲಬುರಗಿ:ಕೇಂದ್ರ ಸಾರಿಗೆ ಸಚಿವ ನೀತಿನ್ ಗಡ್ಕರಿ ಕುಟುಂಬ ಸಮೇತ ಸುಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇಗುಲದ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಮಹಾರಾಷ್ಟ್ರ ಪ್ರವಾಸದಲ್ಲಿರುವ ಅವರು, ಅಕ್ಕಲಕೋಟದಿಂದ ಹೆಲಿಕ್ಯಾಪ್ಟರ್ ಮೂಲಕ ಗಾಣಗಾಪುರಕ್ಕೆ ಬಂದಿಳಿದರು. ಕುಟುಂಬ ಸಮೇತ ಗಾಣಗಾಪುರ ದತ್ತಾತ್ರೇಯ ಪಾದುಕೆಗಳ ದರ್ಶನ ಪಡೆದರು.
ಗಾಣಗಾಪುರ ದತ್ತಾತ್ರೇಯನ ದರ್ಶನ ಪಡೆದ ಕೇಂದ್ರ ಸಚಿವ ಗಡ್ಕರಿ - Union Transport Minister Nitin Gadkari
ಕೇಂದ್ರ ಸಾರಿಗೆ ಸಚಿವ ನೀತಿನ್ ಗಡ್ಕರಿ ಅವರು ಕುಟುಂಬ ಸಮೇತ ಗಾಣಗಾಪುರ ದತ್ತಾತ್ರೇಯ ಪಾದುಕೆಗಳ ದರ್ಶನ ಪಡೆದರು.
![ಗಾಣಗಾಪುರ ದತ್ತಾತ್ರೇಯನ ದರ್ಶನ ಪಡೆದ ಕೇಂದ್ರ ಸಚಿವ ಗಡ್ಕರಿ central Minister NItin Gadkari visit Ganagapura Dattatreya's temple](https://etvbharatimages.akamaized.net/etvbharat/prod-images/768-512-15112954-thumbnail-3x2-bin.jpg)
ದತ್ತಾತ್ರೇಯನ ದರ್ಶನ ಪಡೆದ ಕೇಂದ್ರ ಸಚಿವ ಗಡ್ಕರಿ
ದತ್ತಾತ್ರೇಯನ ದರ್ಶನ ಪಡೆದ ಕೇಂದ್ರ ಸಚಿವ ಗಡ್ಕರಿ
ಬಿಜೆಪಿ ರಾಜ್ಯ ಉಪಾಧ್ಯಕ್ಷ, ಅಫಜಲಪುರ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಸೇರಿ ಅನೇಕ ಬಿಜೆಪಿ ನಾಯಕರುಗಳು ಗಾಣಗಾಪುರದಲ್ಲಿ ಗಡ್ಕರಿ ಅವರನ್ನು ಸ್ವಾಗತ ಕೋರಿದರು. ದೇವಸ್ಥಾನದ ಅರ್ಚಕ ಮಂಡಳಿ ವತಿಯಿಂದ ಗಡ್ಕರಿ ದಂಪತಿಗೆ ಆತ್ಮೀಯವಾಗಿ ಸತ್ಕಾರ ಮಾಡಿದರು.
ಇದನ್ನೂ ಓದಿ:ರಾಜಾಹುಲಿ ರಾಜಾಹುಲಿಯೊಂದಿಗೇ ಬೇಟೆ ಆಡುತ್ತೆ, ವಿನಃ ಇಲಿ ಹೆಗ್ಗಣಗಳೊಂದಿಗೆ ಅಲ್ಲ: ಯತ್ನಾಳ್ಗೆ ವಚನಾನಂದ ಶ್ರೀ ಟಾಂಗ್
Last Updated : Apr 25, 2022, 7:07 PM IST