ಕಲಬುರಗಿ:ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಲಬುರಗಿಯಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ - ನಾಗರಪಂಚಮಿ
ನಾಡಿನಾದ್ಯಂತ ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಾಗರ ಕಟ್ಟೆಗಳಿಗೆ ತೆರಳಿದ ಮಹಿಳೆಯರು ಕಲ್ಲಿನ ನಾಗರಕ್ಕೆ ಹಾಲೆರೆದು ಭಕ್ತಿಯಿಂದ ಪ್ರಾರ್ಥಿಸಿ ನೈವೇದ್ಯ ಸಮರ್ಪಿಸಿದರು.

ಕಲಬುರಗಿಯಲ್ಲಿ ಸಂಭ್ರಮ ನಾಗರಪಂಚಮಿ ಆಚರಣೆ
ಕಲಬುರಗಿಯಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಾಗರಪಂಚಮಿ ಸಂಭ್ರಮ ಮನೆಮಾಡಿತ್ತು. ಮಹಿಳೆಯರು ಕಲ್ಲಿನ ನಾಗರಕ್ಕೆ ಹಾಲೆರೆದು ಭಕ್ತಿಯಿಂದ ಪ್ರಾರ್ಥಿಸಿ ನೈವೇದ್ಯ ಸಮರ್ಪಿಸಿದರು. ಇದೇ ವೇಳೆ ಕೆಲವೆಡೆ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಲಾಯಿತು. ಎಳ್ಳಿನ ಉಂಡೆ, ಅಕ್ಕಿ ಉಂಡೆ, ಪಾಯಸ, ಕಡುಬು ಇತ್ಯಾದಿಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.
ಶ್ರಾವಣ ಮಾಸದ ಮೊದಲ ಸೋಮವಾರದಂದು ನಾಗರ ಪಂಚಮಿ ಬಂದಿದ್ದು, ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯಾಗಲಿ. ಎಲ್ಲರಿಗೂ ಸುಖ-ಸಮೃದ್ಧಿ ಸಿಗಲಿ ಎಂದು ನಾಗ ದೇವತೆಯಲ್ಲಿ ಪ್ರಾರ್ಥಿಸಿದರು.