ಕಲಬುರಗಿ:ಹನುಮಾನ್ ದೇವಸ್ಥಾನದ ಹುಂಡಿ ಒಡೆದು ಕಳ್ಳನೊಬ್ಬ ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾದ ಘಟನೆ ನಗರದ ವಿಠಲ ನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ನಡೆದಿದೆ. ಕಳ್ಳನ ಕೈಚಳಕ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಕಲಬುರಗಿಯ ವಿಠಲ ನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ನಸುಕಿನ ವೇಳೆ ಕಳ್ಳ ಹುಂಡಿ ಒಡೆದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ.
CCTV ದೃಶ್ಯ: ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ರೂಪಾಯಿ ದೋಚಿದ ಕಳ್ಳ - ಸಿಸಿಟಿವಿ ದೃಶ್ಯ
ಹುಂಡಿ ಒಡೆದು ಕಳ್ಳನೊರ್ವ ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾಗಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
CCTV
ಮುಖ್ಯ ದ್ವಾರದ ಬೀಗ ಮುರಿದು ಒಳಗೆ ನುಸುಳುವ ಚೋರ, ನಂತರ ರಾಡ್‌ನಿಂದ ಹರಸಾಹಸ ಪಟ್ಟು ಹುಂಡಿ ಒಡೆದು ಹಣ ದೋಚಿದ್ದಾನೆ. ಹುಂಡಿ ಒಡೆಯುವ ವೇಳೆ ಸಿಸಿ ಕ್ಯಾಮರಾ ನೋಡಿದ ಕಳ್ಳ ತನ್ನ ಮುಖ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದೆ ಎಂದು ತಿಳಿದು ದೇವಸ್ಥಾನದ ಲೈಟ್ ಬಂದ್ ಮಾಡಿ ಕಳ್ಳತನ ಮಾಡಿದ್ದಾನೆ.
ಹುಂಡಿ ಒಡೆಯಲು 20 ನಿಮಿಷ ಹರಸಾಹಸ ಪಟ್ಟು ಕಡೆಗೂ ಹುಂಡಿ ಒಡೆದು ಭಕ್ತರ ಕಾಣಿಕೆಯ ಹಣ ಕದ್ದೊಯ್ದಿದ್ದಾನೆ. ಈ ಸಂಬಂಧ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.