ಕರ್ನಾಟಕ

karnataka

ETV Bharat / state

ಕರಾಳ ರಾತ್ರಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ.. ಮನೆ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಕಲ್ಲು ತೂರಾಟ..

ಕಿಡಿಗೇಡಿಗಳ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹಿನ್ನೆಲೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಮತ್ತು ಅಧಿಕಾರಿಗಳ ತಂಡ ಬೇಟಿ ನೀಡಿ ಬಡಾವಣೆಯ ಜನರಿಗೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಆರ್‌ಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

cctv-footage-vehicles-are-vandalized-in-gulbarga-by-mobs
ಮನೆ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಕಲ್ಲು ತೂರಾಟ

By

Published : Dec 18, 2021, 7:52 PM IST

ಕಲಬುರಗಿ :ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಮನೆಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ. ದ್ವಿಚಕ್ರವಾಹನದಲ್ಲಿ ಆಗಮಿಸುವ ಕಿಡಿಗೇಡಿಗಳು ವಾಹನಗಳನ್ನ ಜಖಂಗೊಳಿಸಿ ಪೆಟ್ರೋಲ್ ಕದ್ದು ಪರಾರಿಯಾಗುವುದು ಪತ್ತೆಯಾಗಿದೆ.

ಕಲಬುರಗಿಯ ವಿವೇಕಾನಂದ ನಗರ ಮತ್ತು ಸಂತೋಷ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಇದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಈ ಮೊದಲು ಸಹ ಇಂತಹದ್ದೆ ಘಟನೆಗಳು ನಡೆದಿರುವುದು ವರದಿಯಾಗಿತ್ತು.

ಕತ್ತಲಾಗುತ್ತಿದ್ದಂತೆ ಬೈಕ್​ನಲ್ಲಿ ಬರುವ ದುಷ್ಕರ್ಮಿಗಳು ಮನೆ ಮುಂದೆ ಪಾರ್ಕ್​ ಮಾಡಿ ನಿಲ್ಲಿಸಲಾಗಿರುವ ಕಾರು, ಬೈಕ್​​ಗಳಿಗೆ ಕಲ್ಲು ತೂರುವುದಲ್ಲದೆ, ಮನೆಯ ಮೇಲೂ ಕಲ್ಲು ತೂರಿ ಅಲ್ಲಿಂದ ಪರಾರಿಯಾಗುತ್ತಿದ್ದಾರೆ.

ಮನೆ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಕಲ್ಲು ತೂರಾಟ..

ಕಿಡಿಗೇಡಿಗಳ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹಿನ್ನೆಲೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಮತ್ತು ಅಧಿಕಾರಿಗಳ ತಂಡ ಬೇಟಿ ನೀಡಿ ಬಡಾವಣೆಯ ಜನರಿಗೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಆರ್‌ಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಸ್ತೆ ಅಪಘಾತ : ತಲೆಯ ಮೇಲೆ ಅಗ್ನಿಶಾಮಕ ವಾಹನ ಚಕ್ರ ಹರಿದು ಮಹಿಳೆ ಸಾವು

ABOUT THE AUTHOR

...view details