ಕಲಬುರಗಿ : ಮಕ್ಕಳ ಕಲ್ಯಾಣ ಸಮಿತಿ ಸದಸ್ಯನೊಬ್ಬ ಸಮಿತಿಯ ಅಧ್ಯಕ್ಷೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯನಿಂದ ಅಧ್ಯಕ್ಷೆ ಮೇಲೆ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು - ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆಗೆ ಕಿರುಕುಳ
ಮಕ್ಕಳ ಕಲ್ಯಾಣ ಸಮಿತಿ ಸದಸ್ಯನೊಬ್ಬ ಸಮಿತಿಯ ಅಧ್ಯಕ್ಷೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
![ಮಕ್ಕಳ ಕಲ್ಯಾಣ ಸಮಿತಿ ಸದಸ್ಯನಿಂದ ಅಧ್ಯಕ್ಷೆ ಮೇಲೆ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು Case register](https://etvbharatimages.akamaized.net/etvbharat/prod-images/768-512-11:03-kn-klb-01-cwc-sexual-harresment-7208086-06062020104923-0606f-1591420763-481.jpg)
Case register
ಮಕ್ಕಳ ಕಲ್ಯಾಣ ಜಿಲ್ಲಾ ಸಮಿತಿ ಸದಸ್ಯ ಸೂರ್ಯಕಾಂತ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ, ಆತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಹಲವು ಬಾರಿ ತಿಳಿ ಹೇಳಿದರೂ ಕಿರುಕುಳ ನೀಡಿದ್ದಾನೆಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ಸಹ ತಂದಿದ್ದು, ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಸಮಿತಿಗೆ ಒಪ್ಪಿಸಿ ವಿಚಾರಣೆಗೆ ಸೂಚಿಸಿದ್ದರು. ನಂತರದಲ್ಲಿ ಈಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
TAGGED:
ಮಕ್ಕಳ ಕಲ್ಯಾಣ ಸಮಿತಿ