ರಾಯಚೂರು: ದೇವದುರ್ಗ ತಾಲೂಕಿನಲ್ಲಿ ನಾಲ್ಕು ಜನರಿಗೆ ಕೊರೊನಾ ಸೋಂಕು ಹರಡಿದೆ ಎಂಬ ಸುಳ್ಳು ಸಂದೇಶವನ್ನು ಹರಿಬಿಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ.
ನಾಲ್ವರಿಗೆ ಕೊರೊನಾ ಪಾಸಿಟಿವ್ ಎಂದು ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ದೂರು - ಕೊರೊನಾ ಸೋಂಕು ಬಗ್ಗೆ ಸುಳ್ಳು ಸುದ್ದಿ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಾಲ್ಕು ಜನರಿಗೆ ಕೊರೊನಾ ಸೋಂಕು ಹರಡಿದೆ ಎಂಬ ಸುಳ್ಳು ವದಂತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
![ನಾಲ್ವರಿಗೆ ಕೊರೊನಾ ಪಾಸಿಟಿವ್ ಎಂದು ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ದೂರು case-aginst-fake-news-spreaders](https://etvbharatimages.akamaized.net/etvbharat/prod-images/768-512-6601421-thumbnail-3x2-surya.jpg)
ದೇವದುರ್ಗ ತಾಲೂಕಿನಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಕನ್ಫ್ರ್ಮ್ ಆಗಿದೆ ಎನ್ನುವ 5 ನಿಮಿಷ, 37 ಸೆಕೆಂಡ್ ಇರುವ ಇಬ್ಬರ ಸಂಭಾಷಣೆಯನ್ನ ವಾಟ್ಸ್ಆ್ಯಪ್ ಮೂಲಕ ಹಲವು ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿತ್ತು. ಇದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ರು. ಆದ್ರೆ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಶಂಕಿತರು ಎಂದು ಗುರುತಿಸಲಾಗಿದೆ ಹೊರತು ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ.
ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಸುಳ್ಳು ಸಂಭಾಷಣೆ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ಇಲಾಖೆಗೆ ದೂರು ನೀಡಲಾಗಿದೆ.