ಕಲಬುರಗಿ: ಟೈರ್ ಸ್ಫೋಟಗೊಂಡ ಪರಿಣಾಮ ರಸ್ತೆ ಪಕ್ಕದ ಕಮಾನಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಜೇವರ್ಗಿ ತಾಲೂಕಿನ ಮಾದಬೂಳ ಬಳಿ ಸಂಭವಿಸಿದೆ.
ಕಾರ್ ಟೈರ್ ಸ್ಫೋಟ: ತಾಯಿ-ಮಗ, ಚಾಲಕ ಸ್ಥಳದಲ್ಲಿಯೇ ಸಾವು
ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಅವಘಡದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ. ಜೇವರ್ಗಿ ತಾಲೂಕಿನ ಮಾದಬೂಳ ಬಳಿ ಅಪಘಾತ ಸಂಭವಿಸಿದೆ.
ಕಾರ್ನ ಟೈರ್ ಸ್ಪೋಟ
ಅನಿತಾ ಹಾಗೂ ಅವರ ಪುತ್ರ ಹೇಮಂತ್ ಮತ್ತು ಚಾಲಕ ರಾಮು ಸಾವನ್ನಪ್ಪಿರುವ ದುರ್ದೈವಿಗಳು. ಬಿಎಸ್ಸಿ ಪ್ರವೇಶಕ್ಕೆಂದು ದಾಖಲೆಗಳ ಪರಿಶೀಲನೆಗಾಗಿ ಸುರಪುರದಿಂದ ಕಲಬುರಗಿಗೆ ಕಾರಿನಲ್ಲಿ ತೆರಳುತ್ತಿದ್ದ ಮಾರ್ಗ ಮಧ್ಯೆ ಘಟನೆ ಸಂಭವಿಸಿದೆ. ಮೃತರೆಲ್ಲರೂ ಸುರಪುರ ಪಟ್ಟಣಕ್ಕೆ ಸೇರಿದವರಾಗಿದ್ದಾರೆ.
ಕಾರಿನ ಬಲಬದಿಯ ಟೈರ್ ಸಿಡಿದು ಈ ಅವಘಡ ಸಂಭವಿಸಿದೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 17, 2020, 6:46 AM IST