ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ನಾಮಪತ್ರಗಳಳನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿ, ಕ್ರಮಬದ್ಧ ಇಲ್ಲದ ನಾಮಪತ್ರಗಳನ್ನು ತಿರಸ್ಕರಿಸಿದರು. ಶುಕ್ರವಾರ ಯಾವ ಜಿಲ್ಲೆಯಲ್ಲಿ ಎಷ್ಟು ನಾಮಪತ್ರಗಳು ಅಂಗೀಕಾರವಾದವು ಮತ್ತು ಎಷ್ಟು ತಿರಸ್ಕೃತಗೊಂಡಿವೆ ಎಂಬ ಮಾಹಿತಿ ಇಲ್ಲಿದೆ...
ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 6 ಮಹಿಳೆಯರು ಸೇರಿ 138 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿವೆ. ಅಫಜಲಪೂರ-11, ಜೇವರ್ಗಿ-28, ಚಿತ್ತಾಪುರ-8, ಸೇಡಂ-15, ಚಿಂಚೋಳಿ-10, ಗುಲಬರ್ಗಾ ಗ್ರಾಮೀಣ-14, ಗುಲಬರ್ಗಾ ದಕ್ಷಿಣ-22, ಗುಲಬರ್ಗಾ ಉತ್ತರ-16 ಹಾಗೂ ಆಳಂದ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಜಿಲ್ಲೆಯ 9 ಕ್ಷೇತ್ರಗಳಲ್ಲಿ ಒಟ್ಟು 145 ಅಭ್ಯರ್ಥಿಗಳು 217 ನಾಮಪತ್ರ ಸಲ್ಲಿಸಿದ್ದರು.
ಧಾರವಾಡ:ಧಾರವಾಡ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ 182 ನಾಮಪತ್ರಗಳ ಪೈಕಿ ಅಂತಿಮವಾಗಿ 152 ನಾಮಪತ್ರಗಳು ಕ್ರಮಬದ್ಧವಾಗಿವೆ ಮತ್ತು 30 ನಾಮಪತ್ರಗಳು ತಿರಸ್ಕೃತಗೊಂಡಿವೆ. ನವಲಗುಂದ 19, ಕುಂದಗೋಳ 31, ಧಾರವಾಡ 23, ಹುಬ್ಬಳ್ಳಿ-ಧಾರವಾಡ ಪೂರ್ವ 13, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ 18, ಹುಬ್ಬಳ್ಳಿ-ಧಾರವಾಡ ಪಶ್ಚಿಮ 31, ಕಲಘಟಗಿ 17 ನಾಮಪತ್ರಗಳು ಕ್ರಮಬದ್ಧವಾಗಿವೆ.
ಬೆಂಗಳೂರು:ಆನೇಕಲ್ ಮೀಸಲು ಕ್ಷೇತ್ರ 177ರ ವಿಧಾನಸಭಾ ಕ್ಷೇತ್ರ ಚುಮಾವಣಾ ಕಣದಲ್ಲಿ ಒಟ್ಟು 16 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರ ಪೈಕಿ ನಾಮಪತ್ರ ಪರಿಶೀಲನಾ ಹಂತ ಮುಗಿದು 12 ಮಂದಿ ಕಣದಲ್ಲಿ ಉಳಿದಿದ್ದಾರೆ.
ವಿಜಯನಗರ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ 105 ನಾಮಪತ್ರಗಳಲ್ಲಿ 69 ಅಭ್ಯರ್ಥಿಗಳ ನಾಮಪತ್ರಗಳು ಮಾತ್ರ ಅಂಗೀಕಾರವಾಗಿದ್ದು, ಉಳಿದ 36 ತಿರಸ್ಕೃತಗೊಂಡಿವೆ.