ಕಲಬುರಗಿ/ಸೇಡಂ:ಕೊರೊನಾ ತಡೆಗಾಗಿ ನಾನಾ ಕಸರತ್ತು ನಡೆಸುತ್ತಿರುವ ಜನ ಅನೇಕ ಹವ್ಯಾಸಗಳನ್ನು ತೊರೆದು ದೇಸಿ ಪದ್ಧತಿಯತ್ತ ವಾಲುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಇಲ್ಲಿನ ಉದ್ಯಮಿ ಹಾಗೂ ನಿಸರ್ಗಪ್ರಿಯ ಶ್ರೀನಿವಾಸ ಕಾಸೋಜು ಎಂಬುವರು ಮನೆ ಮದ್ದನ್ನು ತಯಾರಿಸಿ ಜನರಿಗೆ ಹಂಚುವ ಮೂಲಕ ಮಾನವೀಯತೆ ಮೆರೆಯುವುದರ ಜೊತೆಗೆ ಜನರ ಜೀವಕ್ಕೆ ರಕ್ಷಣೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ.
ಸೇಡಂನಲ್ಲಿ ಕೊರೊನಾ ಬರದಂತೆ ಜನರಿಗೆ ಮನೆ ಮದ್ದು ವಿತರಿಸಿದ ಉದ್ಯಮಿ! - ಕಲಬುರಗಿ ಸುದ್ದಿ
ರೋಗ ನಿರೋಧಕ ಮತ್ತು ರಕ್ತ ಶುದ್ಧಿ ಮಾಡುವ, ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಶಕ್ತಿ ಇರುವ ದಾಲ್ಚಿನ್ನಿ, ಹೆಪ್ರಿ, ಕರಿಬೇವು, ಕರಿಮೆಣಸು, ತುಳಸಿ ಎಲೆ, ಲವಂಗ, ಒಣಶುಂಠಿ, ಅರಿಶಿಣ ಗೆಡ್ಡೆ, ಅಜ್ವಾನ್ ಹಾಗೂ ಇನ್ನಿತರೆ ಪದಾರ್ಥಗಳಿಂದ ತಯಾರಿಸಿದ ಕಷಾಯವನ್ನು ಶ್ರೀನಿವಾಸ ಕಾಸೋಜು ಎಂಬುವವರು ಜನರಿಗೆ ಹಂಚುತ್ತಿದ್ದಾರೆ.
ಮನೆಯಲ್ಲೇ ವಿವಿಧ ಬಗೆಯ ತಿನಿಸುಗಳಿಂದ ತಯಾರಿಸಿದ ಕಷಾಯವನ್ನು ವೈದ್ಯರು, ಪೊಲೀಸರು, ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಜೊತೆಗೆ ಸಾರ್ವಜನಿಕರಿಗೆ ಪ್ರತಿನಿತ್ಯ ಹಂಚಿ, ರೋಗದಿಂದ ದೂರವಿರುವಂತೆ ತಿಳಿಹೇಳುತ್ತಿದ್ದಾರೆ.
ಕಷಾಯ ಸೇವಿಸಿದ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಅನೇಕ ಸಿದ್ಧೌಷಧಗಳಿವೆ. ಅಡುಗೆ ಮನೆಯ ಪದಾರ್ಥಗಳಿಂದ ತಯಾರಿಸಿದ ಕಷಾಯದಿಂದ ಕೊರೊನಾ ಹೊಡೆದೋಡಿಸಬಹುದಾಗಿದೆ. ರೋಗ ನಿರೋಧಕ ಮತ್ತು ರಕ್ತ ಶುದ್ಧಿ ಮಾಡುವ, ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಶಕ್ತಿ ಇರುವ ದಾಲ್ಚಿನ್ನಿ, ಹೆಪ್ರಿ, ಕರಿಬೇವು, ಕರಿಮೆಣಸು, ತುಳಸಿ ಎಲೆ, ಲವಂಗ, ಒನಶುಂಠಿ, ಅರಿಶಿಣ ಗೆಡ್ಡೆ, ಅಜ್ವಾನ್ ಹಾಗೂ ಇನ್ನಿತರೆ ಪದಾರ್ಥಗಳಿಂದ ತಯಾರಿಸಿದ ಕಷಾಯ ದಿನನಿತ್ಯ ಸೇವಿಸುವುದರಿಂದ ಯಾವುದೇ ರೋಗ ಮನುಷ್ಯನ ಬಳಿ ಸುಳಿಯುವುದಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಕಷಾಯ ನೀಡಿ ಆರೋಗ್ಯ ಕಾಪಾಡುತ್ತಿರುವ ಕಲ್ಪತರು ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀನಿವಾಸ ಕಾಸೋಜು ಕುಟುಂಬದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.