ಕಲಬುರಗಿ :ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ತರಕಾರಿ ಹಾಗೂ ಕಿರಾಣಿ ವ್ಯಾಪಾರಿಗಳಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ದಿನಕ್ಕೆ 6 ಗಂಟೆಗಳ ಕಾಲ ಮಾತ್ರ ವ್ಯಾಪಾರ, ವಹಿವಾಟ ನಡೆಸಲು ಕಿರಾಣಿ ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ.
ದಿನಕ್ಕೆ ಆರು ಗಂಟೆ ಮಾತ್ರ ವ್ಯಾಪಾರ : ಕಿರಾಣಿ ಅಂಗಡಿ ಮಾಲೀಕರ ನಿರ್ಧಾರ
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ದಿನಸಿ ನೀಡಲಾಗುವುದು, ಗ್ರಾಹಕರು ಇದಕ್ಕೆ ಸಹಕರಿಸುವಂತೆ ಮನವಿ ಕೂಡ ಮಾಡಿದ್ದಾರೆ..
ಅಂಗಡಿ ಮಾಲೀಕರ ನಿರ್ಧಾರ
ಕಳೆದ ಎರಡು ದಿನಗಳಿಂದ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಅತೀ ಹೆಚ್ಚು ವಿವಿಧ ಅಂಗಡಿಗಳ ಮಾಲೀಕರಲ್ಲಿ ಸೋಂಕು ಕಾಣಿಸಿದೆ. ಇದರಿಂದ ಎಚ್ಚೆತ್ತ ಕಿರಾಣಿ ಅಂಗಡಿ ಮಾಲೀಕರು, ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದು ವ್ಯಾಪಾರ ನಡೆಸಲು ನಿರ್ಧರಿಸಿದ್ದಾಗಿ ಕಿರಾಣಿ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಭಾಗವತ್ ಸೂಳೆ ತಿಳಿಸಿದ್ದಾರೆ.
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ದಿನಸಿ ನೀಡಲಾಗುವುದು, ಗ್ರಾಹಕರು ಇದಕ್ಕೆ ಸಹಕರಿಸುವಂತೆ ಮನವಿ ಕೂಡ ಮಾಡಿದ್ದಾರೆ.