ಕಲಬುರಗಿ:ಸ್ಟೇರಿಂಗ್ ತುಂಡಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, 25 ಜನ ಗಾಯಗೊಂಡ ಘಟನೆ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಬಸ್ನ ಸ್ಟೇರಿಂಗ್ ತುಂಡಾಗಿ ಮರಕ್ಕೆ ಡಿಕ್ಕಿ: 25 ಜನರಿಗೆ ಗಾಯ - ಕಲಬುರಗಿಯ ಚಿಂಚೋಳಿ ಪಟ್ಟಣದ ಹೊರವಲಯದ ಸಕ್ಕರೆ ಕಾರ್ಖಾನೆ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ನ ಸ್ಟೇರಿಂಗ್ ತುಂಡಾಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕಲಬುರಗಿಯ ಚಿಂಚೋಳಿ ಪಟ್ಟಣದ ಹೊರವಲಯದ ಸಕ್ಕರೆ ಕಾರ್ಖಾನೆ ಬಳಿ ನಡೆದಿದೆ.
ಬಸ್ನ ಸ್ಟೇರಿಂಗ್ ತುಂಡಾಗಿ ಮರಕ್ಕೆ ಡಿಕ್ಕಿ
ಈ ಘಟನೆಯಲ್ಲಿ ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.