ಕಲಬುರಗಿ:ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಘಟನೆ ಕಲಬುರಗಿ ತಾಲೂಕಿನ ಉಪಳಾಂವ ಹತ್ತಿರ ನಡದಿದೆ.
ಬೈಕ್ಗೆ ಸಾರಿಗೆ ಬಸ್ ಡಿಕ್ಕಿ ಮೂವರು ಬೈಕ್ ಸವಾರರಿಗೆ ಗಂಭೀರ ಗಾಯ - undefined
ಸಾರಿಗೆ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ತಾಲೂಕಿನಲ್ಲಿ ನಡೆದಿದೆ.
![ಬೈಕ್ಗೆ ಸಾರಿಗೆ ಬಸ್ ಡಿಕ್ಕಿ ಮೂವರು ಬೈಕ್ ಸವಾರರಿಗೆ ಗಂಭೀರ ಗಾಯ](https://etvbharatimages.akamaized.net/etvbharat/images/768-512-2806402-1110-9d755cf9-b50f-438c-9683-e43f62617df2.jpg)
ಬೈಕ್ಗೆ ಸಾರಿಗೆ ಬಸ್ ಡಿಕ್ಕಿ ಮೂವರು ಬೈಕ್ ಸವಾರರಿಗೆ ಗಂಭೀರ ಗಾಯ.
ಕಲಬುರಗಿಯಿಂದ ಬೀದರ್ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ. ಬೈಕ್ ಮೇಲೆ ಮೂವರು ಸವಾರರಿದ್ದರು. ಡಿಕ್ಕಿ ರಬಸಕ್ಕೆ ಮೂವರು ತೀವ್ರ ರಕ್ತಸ್ರಾವದಿಂದ ರಸ್ತೆ ಮೇಲೆ ಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.