ಕರ್ನಾಟಕ

karnataka

ETV Bharat / state

ಬೈಕ್​ಗೆ ಬಸ್ ಡಿಕ್ಕಿ... ಕಲಬುರಗಿಯಲ್ಲಿ ಪ್ರಾಂಶುಪಾಲ ಸಾವು - ಕಲಬುರಗಿ ಅಪಘಾತ ಸುದ್ದಿ

ಬೈಕ್​ಗೆ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಲಬುರಗಿ ನಗರದ ರಿಂಗ್ ರೋಡ್​ನಲ್ಲಿ ಈ ದುರ್ಘಟನೆ ನಡೆದಿದೆ.

bus-accident-principal-died

By

Published : Aug 4, 2019, 9:06 PM IST

ಕಲಬುರಗಿ:ಬೈಕ್​ಗೆ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ರಿಂಗ್ ರೋಡ್​ನಲ್ಲಿ ಸಂಭವಿಸಿದೆ.

ಭಾಲ್ಕಿಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಸಾರಿಗೆ ಬಸ್ ರಿಂಗ್​​ ರೋಡ್​ ಉದನೂರು ಕ್ರಾಸ್ ಬಳಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಂಬಿಕಾ ನಗರದ ವಿಠ್ಠಲ್ ಹೂಗಾರ(35) ಮೃತ ಪ್ರಾಂಶುಪಾಲ.

ವಿಠ್ಠಲ್ ಹೂಗಾರ ಅವರು ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾಗಿದ್ದರು ಎನ್ನಲಾಗುತ್ತಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details