ಕರ್ನಾಟಕ

karnataka

ETV Bharat / state

ಎತ್ತಿನ ಬಂಡಿ ಪಲ್ಟಿಯಾಗಿ ಇಬ್ಬರು ಮಹಿಳೆಯರ ದುರ್ಮರಣ - ಬಂಡಿ ಪಲ್ಟಿ

ನಾಲವಾರ ಗ್ರಾಮದ ಬಳಿ ಎತ್ತಿನ ಬಂಡಿ ಪಲ್ಟಿಯಾಗಿ ಭಾರಿ ದುರಂತ ಸಂಭವಿಸಿದೆ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಎತ್ತಿನ ಬಂಡಿಯಲ್ಲಿ ಸಾಗುವಾಗ ಬಂಡಿ ಪಲ್ಟಿ ಹೊಡೆದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಇಬ್ಬರು ಮಹಿಳೆಯರು ಸಾವು

By

Published : Aug 26, 2019, 9:34 AM IST

ಕಲಬುರಗಿ: ಎತ್ತಿನ ಬಂಡಿ‌ ಪಲ್ಟಿಯಾಗಿ ಇಬ್ಬರು ರೈತ ಮಹಿಳೆಯರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಬಳಿ ನಡೆದಿದೆ.

ನಾಲವಾರ ಗ್ರಾಮದ ನಿವಾಸಿಗಳಾದ ಗಂಗಮ್ಮ(50), ಚಂದ್ರಕಲಾ(35) ಘಟನೆಯಲ್ಲಿ ಮೃತರು. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ‌.

ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.

ABOUT THE AUTHOR

...view details