ಕಲಬುರಗಿ:ವಿಮಾನ ನಿಲ್ದಾಣದಿಂದ 56 ಕಿ.ಮಿ ವ್ಯಾಪ್ತಿಯೊಳಗೆ ಎತ್ತರದ ಕಟ್ಟಡಗಳು ತಲೆಯೆತ್ತುವ ಮುನ್ನ ವಿಮಾನ ನಿಲ್ದಾಣದ ಅಥಾರಿಟಿ ಆಫ್ ಇಂಡಿಯಾದಿಂದ ಹೈಟ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ.
ಕಟ್ಟಡ ನಿರ್ಮಾಣ, ವಿನ್ಯಾಸ ಒಳಗೊಂಡಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡುವ ಮುನ್ನ ಭಾರತ ಸರ್ಕಾರದ ಅಧಿಸೂಚನೆಯಂತೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ಹೈಟ್ ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ ಶರತ್ ತಿಳಿಸಿದ್ದಾರೆ.