ಕಲಬುರಗಿ: ರಾಜ್ಯ ರಾಜಕೀಯದಲ್ಲಿ ನಡೆದಿರುವ ಸಿಡಿ ರಾಜಕೀಯ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವದಲ್ಲದೆ, ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿ ಆಗಲಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.
ಬಿಎಸ್‌ವೈ ಮುಕ್ತ ಬಿಜೆಪಿ ಅಲ್ಲ, ಬಿಜೆಪಿ ಮುಕ್ತ ಕರ್ನಾಟಕ ಆಗಲಿದೆ: ಪ್ರಿಯಾಂಕ್ ಖರ್ಗೆ - ಬಿಜೆಪಿ ಮುಕ್ತ ಕರ್ನಾಟಕ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಸಿಡಿ ಬಗೆಗಿನ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಟ್ವೀಟ್ ಮಾಡಿ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವದಲ್ಲದೆ ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿ ಇದು ಎಂದಿದ್ದಾರೆ.
ಬಿಜೆಪಿ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆ ಬೆನ್ನೆಲ್ಲೆ ಬುಗಿಲೆದ್ದಿರುವ ಸಿಡಿ ವಿವಾದ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸಿಡಿ ರಾಜಕೀಯ ಕೇವಲ ಬಿಎಸ್‌ವೈ ಮುಕ್ತ ಬಿಜೆಪಿಯಾಗುವುದಷ್ಟೇ ಅಲ್ಲದೆ ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿಯಾಗಲಿದೆ ಎಂದಿದ್ದಾರೆ.
ಇನ್ನು ಮಂತ್ರಿಮಂಡಲದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದಕ್ಕೆ ಕುಟುಕಿರುವ ಅವರು, ಈ ಮುಂಚೆಯಂತೆ ಮಂತ್ರಿಮಂಡಲದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕದಿರುವುದು ಹಾಗೂ ಇಡೀ ಕಲ್ಯಾಣ ಕರ್ನಾಟಕದಿಂದ ಅಶಕ್ತ ಪ್ರಾತಿನಿಧ್ಯ ತೋರುತ್ತಿರುವದು ನೋಡಿದರೆ ಬಿಜೆಪಿ ಈ ಭಾಗವನ್ನು ಪ್ರಮುಖವೆಂದು ಪರಿಗಣಿಸಿಲ್ಲ ಎನ್ನುವುದನ್ನು ನಿರೂಪಿಸುತ್ತದೆ ಎಂದು ಟೀಕಿಸಿದ್ದಾರೆ.