ಕಲಬುರಗಿ:ಹಾಡಹಗಲೇ ಯುವಕನೋರ್ವ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಗರದ ಕೆಬಿಎನ್ ಆಸ್ಪತ್ರೆ ಎದುರು ನಡೆದಿದೆ. ನಗರದ ಫಿಲ್ಟರ್ ಬೆಡ್ ನಿವಾಸಿ ವಿಜಯ್ ಎಂಬಾತನಿಗೆ ಚಾಕು ಇರಿಯಲಾಗಿದೆ.
ಚಾಕು ಇರಿತದಿಂದ ತೀವ್ರ ಗಾಯಗೊಂಡ ಯುವಕ ವಿಜಯ್ ತೀವ್ರ ರಕ್ತಸ್ರಾವದಿಂದ ಬೈಕ್ ಮೇಲೆ ಕುಳಿತು ಒದ್ದಾಡುತ್ತಿದ್ದರೂ ಕೂಡ ಸ್ಥಳೀಯರು ಅಸಹಾಯಕರಂತೆ ನಿಂತು ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರು ಯುವಕನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.