ಕಲಬುರಗಿ: ಜಿಲ್ಲೆಯಲ್ಲಿಂದು ದುರ್ಘಟನೆ ನಡೆದಿದೆ. ಬೈಕ್, ಟೆಂಪೋ ಮತ್ತು ಕಾರು ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಅಣ್ಣ ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿ ನಡೆದಿದೆ.
ಕಲಬುರಗಿಯಲ್ಲಿ ಸರಣಿ ಅಪಘಾತ: ಅಣ್ಣ-ತಂಗಿ ಸ್ಥಳದಲ್ಲೇ ಸಾವು - ಕಲಬುರಗಿ ಸರಣಿ ಅಪಘಾತ
ಕಲಬುರಗಿ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಬೈಕ್ನಲ್ಲಿದ್ದ ಅಣ್ಣ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಲಬುರಗಿಯಲ್ಲಿ ಅಪಘಾತ
ಅಫಜಲಪುರ ತಾಲೂಕಿನ ಶಿವೂರು ಗ್ರಾಮದ ನಿವಾಸಿಗಳಾದ ಅಜಯ್ ರೋಡಗಿ (29) ಹಾಗೂ ಪ್ರೇಮಾ ಪ್ರವೀಣ (27) ಮೃತರು ಎಂದು ಗುರುತಿಸಲಾಗಿದೆ. ಇಬ್ಬರು ಮೃತರು ಬೈಕ್ನಲ್ಲಿ ಕಲಬುರಗಿಯಿಂದ ಅಫಜಲಪುರಕ್ಕೆ ಹೊರಟಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.
ಇನ್ನೂ ಐವರಿಗೆ ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.