ಕಲಬುರಗಿ:ಮಹಾರಾಷ್ಟ್ರದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದ್ದಾರೆ. ಸಿಪಿಐ, ಸಿಪಿಐಎಂ, ಜೆಡಿಎಸ್ ಪಕ್ಷಗಳ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರೋ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿರೋ ರಾಜ್ಯದ ಕಾರ್ಮಿಕರನ್ನು ಕರೆತರಲಾಗಿಲ್ಲ.
ಮಹಾರಾಷ್ಟ್ರದಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆತನ್ನಿ.. ಮಾರುತಿ ಮಾನ್ಪಡೆ ಆಗ್ರಹ - maruti malpade
ಸಚಿವರ ಮಕ್ಕಳನ್ನು ಕರೆತರಲು ವಿಶೇಷ ವಿಮಾನಗಳನ್ನು ವಿದೇಶಗಳಿಗೆ ಕಳುಹಿಸಲಾಗಿತ್ತು. ಕಾರ್ಮಿಕರಿಗಾಗಿ ಕನಿಷ್ಟ ರೈಲು, ಬಸ್ ವ್ಯವಸ್ಥೆ ಮಾಡಿ ಎಲ್ಲರಿಗೂ ಉದ್ಯೋಗ ಖಾತ್ರಿ ಕೆಲಸ ನೀಡಿ. ಕಲಬುರ್ಗಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸಂಖ್ಯೆ ಹೆಚ್ಚಿಸಬೇಕು.
ಮಹಾರಾಷ್ಟ್ರದಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆತನ್ನಿ: ಮಾರುತಿ ಮಾನ್ಪಡೆ ಆಗ್ರಹ
ಮಹಾರಾಷ್ಟ್ರದಲ್ಲಿ ರಾಜ್ಯದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಿ. ಉಚಿತವಾಗಿ ಅವರವರ ಊರುಗಳಿಗೆ ಹೋಗಲು ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು.
ಸಚಿವರ ಮಕ್ಕಳನ್ನು ಕರೆತರಲು ವಿಶೇಷ ವಿಮಾನಗಳನ್ನು ವಿದೇಶಗಳಿಗೆ ಕಳುಹಿಸಲಾಗಿತ್ತು. ಕಾರ್ಮಿಕರಿಗಾಗಿ ಕನಿಷ್ಟ ರೈಲು, ಬಸ್ ವ್ಯವಸ್ಥೆ ಮಾಡಿ. ಎಲ್ಲರಿಗೂ ಉದ್ಯೋಗ ಖಾತ್ರಿ ಕೆಲಸ ನೀಡಿ, ಕಲಬುರ್ಗಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸಂಖ್ಯೆ ಹೆಚ್ಚಿಸಿ ಎಂದು ಮಾನ್ಪಡೆ ಒತ್ತಾಯಿಸಿದ್ದಾರೆ.