ಕರ್ನಾಟಕ

karnataka

ETV Bharat / state

ಅಂತ್ಯಕ್ರಿಯೆಗೆ ಹೋಗಿ ಬರುವಷ್ಟರಲ್ಲಿ ಸೇತುವೆ ಜಲಾವೃತ: ಪಕ್ಕದ ಗ್ರಾಮದಲ್ಲಿ ರಾತ್ರಿ ಕಳೆದ ಜನ

ಅಂತ್ಯಕ್ರಿಯೆಗೆಂದು ಚಿಂಚೋಳಿ ತಾಲೂಕಿನ ಶೇರಿಬಿಕನಳ್ಳಿ ಗ್ರಾಮದಿಂದ ಜನರು ತೆರಳಿದ್ದರು. ಅವರು ವಾಪಸ್​ ಬರುವಷ್ಟರಲ್ಲಿ ಸೇತುವೆ ಜಲಾವೃತವಾಗಿದೆ. ಪರಿಣಾಮ ಗ್ರಾಮಸ್ಥರು ಪಕ್ಕದ ಊರಿನಲ್ಲಿ ಕಾಲ ಕಳೆದಿದ್ದಾರೆ.

ಅಂತ್ಯಕ್ರಿಯೆಗೆ ಹೋಗಿ ಬರುವಷ್ಟರಲ್ಲಿ ಸೇತುವೆ ಜಲಾವೃತ
ಅಂತ್ಯಕ್ರಿಯೆಗೆ ಹೋಗಿ ಬರುವಷ್ಟರಲ್ಲಿ ಸೇತುವೆ ಜಲಾವೃತ

By

Published : Jul 28, 2022, 6:46 PM IST

Updated : Jul 28, 2022, 7:13 PM IST

ಕಲಬುರಗಿ: ಚಿಂಚೋಳಿ ತಾಲೂಕಿನ ಸುತ್ತಮುತ್ತ ಬಾರಿ ಮಳೆ ಸುರಿದಿದೆ. ಪರಿಣಾಮ ಅಂತ್ಯಕ್ರಿಯೆಗೆ ತೆರಳಿದ್ದ ಶೇರಿಬಿಕನಳ್ಳಿ ಗ್ರಾಮಸ್ಥರು, ಮರಳಿ ಊರಿಗೆ ಬರುವಷ್ಟರಲ್ಲಿ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಅವರು ಊರು ಸೇರಲು ಆಗದೇ, ರಾತ್ರಿ ಇಡೀ ಪಕ್ಕದ ಊರಿನಲ್ಲಿ ಕಳೆದಿದ್ದಾರೆ.

ಮಂಟಿಕಿ ತಾಂಡಾದಲ್ಲಿ ವಿನೋದ್ ಎಂಬುವರು ಮೃತ ಪಟ್ಟ ಹಿನ್ನೆಲೆ ಅಂತ್ಯಕ್ರಿಯೆಗೆಂದು ಚಿಂಚೋಳಿ ತಾಲೂಕಿನ ಶೇರಿಬಿಕನಳ್ಳಿ ಗ್ರಾಮದಿಂದ ಜನರು ತೆರಳಿದ್ದರು. ಅಂತ್ಯಕ್ರಿಯೆ ಮುಗಿಸಿ ಬರುವಷ್ಟರಲ್ಲಿ ಸೇತುವೆ ಜಲಾವೃತಗೊಂಡು ಗ್ರಾಮದ ಸಂಪರ್ಕ ಕಡಿತವಾಗಿದೆ. ಸಂಪರ್ಕ ಇಲ್ಲದೇ ಸಂಚಾರಕ್ಕೆ ಪರದಾಡಿದ ಜನರಲ್ಲಿ ಕೆಲವರು ಜೀವದ ಹಂಗು ತೊರೆದು ಹರಿಯುವ ನೀರಿನಲ್ಲಿ ಸೇತುವೆ ದಾಟಿ ಮನೆ ಸೇರಿದ್ದಾರೆ.

ಅಂತ್ಯಕ್ರಿಯೆಗೆ ಹೋಗಿ ಬರುವಷ್ಟರಲ್ಲಿ ಸೇತುವೆ ಜಲಾವೃತ

ಅನೇಕರು ಊರು ಸೇರಲಾಗದೇ ರಾತ್ರಿ ಇಡೀ ಪಕ್ಕದ ಧರ್ಮಾಪುರ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಇಂದು ಮಧ್ಯಾಹ್ನದ ನಂತರ ನೀರಿನ ರಬಸ ಕೊಂಚ ಇಳಿಮುಖ ಕಂಡಿದ್ದು, ನಿಧಾನವಾಗಿ ಸೇತುವೆ ದಾಟಿ ಜನ ಮರಳಿ ಗ್ರಾಮಕ್ಕೆ ಆಗಮಿಸಿದ್ದಾರೆ. ಪ್ರತಿ ವರ್ಷ ಸಮಸ್ಯೆ ಎದುರಿಸುತ್ತಿರುವ ಶೇರಿಬಿಕನಳ್ಳಿ ಜನ, ಸೇತುವೆ ಎತ್ತರದಲ್ಲಿ ನಿರ್ಮಿಸುವಂತೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಪ್ರಯೋಜನವಾಗಿಲ್ಲ ಎಂದು ಜನಪ್ರತಿನಿಧಿಗಳ, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಗಿಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ತೆಲಂಗಾಣದ ದಂಪತಿ ಮೃತದೇಹ ಪತ್ತೆ

Last Updated : Jul 28, 2022, 7:13 PM IST

ABOUT THE AUTHOR

...view details