ಕಲಬುರಗಿ :ಜಿಲ್ಲಾಧಿಕಾರಿಗಳ ಸೂಚನೆ ಬಳಿಕವೂ ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡಿಲ್ಲ ಎಂದು ಶಾಸಕ ಎಂ ವೈ ಪಾಟೀಲ ಹಾಗೂ ಮಾಜಿ ಶಾಸಕ ಬಿ ಆರ್ ಪಾಟೀಲ ಆರೋಪಿಸಿದ್ದಾರೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಎಫ್ಆರ್ಪಿ ದರ ನಿಗದಿಗೊಳಿಸಿದೆ. ಆದರೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡದೇ ಕಾರ್ಯಾರಂಭ ಮಾಡಿವೆ. ಈಗಾಗಲೇ ಜಿಲ್ಲಾಧಿಕಾರಿ ದರ ನಿಗದಿಗೆ ಸೂಚಿಸಿದ್ದಾರೆ, ಒಂದು ವಾರ ಕಳೆದರೂ ಕಾರ್ಖಾನೆಗಳು ದರ ನಿಗದಿ ಮಾಡಿಲ್ಲ ಎಂದರು.
ಇದನ್ನೂ ಓದಿ: ಕಲಬುರಗಿ ಏರ್ಪೋರ್ಟ್ಗೆ ವರ್ಷದ ಸಂಭ್ರಮ: 4 ಜಿಲ್ಲೆಗಳನ್ನು ಹಿಂದಿಕ್ಕಿ ಉನ್ನತ ಸ್ಥಾನಕ್ಕೇರಿದ ವಿಮಾನಯಾನ
ಕಲಬುರಗಿಯ ಎನ್ಎಸ್ಎಲ್, ಹವಳಗಾ ರೇಣುಕಾ ಹಾಗೂ ಉಗಾರ್ ಸಕ್ಕರೆ ಕಾರ್ಖಾನೆಗಳು ಉದ್ಧಟತನದಿಂದ ವರ್ತಿಸುತ್ತಿವೆ. ಕಾರ್ಖಾನೆಗಳು ಎಥೆನಾಲ್, ಕಾಕಂಬಿ ಉತ್ಪಾದಿಸಿ ಲಾಭ ಪಡೆಯುತ್ತಿವೆ.
ಆದರೆ, ರೈತ ಸಮುದಾಯಕ್ಕೆ ಮಾತ್ರ ಅನ್ಯಾಯ ಮಾಡುತ್ತಿವೆ. ಈಗಲಾದರೂ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಕಾರ್ಖಾನೆಗಳ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.