ಕಲಬುರಗಿ:ಬಿಸಿಲಿನಿಂದಲೇ ಗುರುತಿಸಿಕೊಂಡ ಕಲಬುರಗಿಯಲ್ಲಿ ಉತ್ತಮ ಮಳೆ ಆಗಿದೆ. ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಮಾತ್ರವಲ್ಲ, ವರ್ಷದ ಬಹುತೇಕ ತಿಂಗಳು ನೀರಿನ ಕೊರತೆ ಎದುರಾಗುತ್ತದೆ. ಆದರೆ, ಈ ಗ್ರಾಮದಲ್ಲಿ ಮಾತ್ರ ನೀರು ಸದಾ ಉಕ್ಕಿ ಹರಿಯುತ್ತಿರುತ್ತದೆ.
ನಗರದಿಂದ ಕೂಗಳತೆ ದೂರದ ಹೀರಾಪುರ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ದಿನದ 24 ಗಂಟೆಗಳ ಕಾಲ ಜಲಧಾರೆ ಸುರಿಯುತ್ತಿದೆ. ಇಲ್ಲಿನ ಮುಖ್ಯ ರಸ್ತೆಯ ವೀರಣ್ಣ ಎಂಬುವವರ ಮನೆ ಎದುರು ಇರುವ ಸುಮಾರು 250 ಅಡಿ ಆಳದ ಬೋರ್ ವೆಲ್ ಇದಾಗಿದೆ. ಕಳೆದ 15 ದಿನಗಳಿಂದ ತನ್ನಷ್ಟಕ್ಕೆ ತಾನೇ ನೀರು ಹೋರ ಚಿಮ್ಮುತ್ತಿದೆ.