ಕರ್ನಾಟಕ

karnataka

By

Published : Sep 6, 2021, 7:40 PM IST

ETV Bharat / state

ಮತದಾನದ ದಿನ ನಮ್ಮ ಜನ ಲಕ್ಷ್ಮಿ ಪೂಜೆಯಲ್ಲಿದ್ದರು.. ಅದಕ್ಕಾಗಿ ಕಲಬುರ್ಗಿಯಲ್ಲಿ ಒಂಚೂರು ಹಿನ್ನಡೆ.. ಎನ್ ರವಿಕುಮಾರ್

ಕಲಬುರಗಿಯಲ್ಲಿ ಕಮಲ ಅರಳೇ ಅರಳುತ್ತೆ. ಆದರೆ, ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡುವುದಿಲ್ಲ. ಶುಕ್ರವಾರ ಮತದಾನ ಇದ್ದ ಕಾರಣ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದೆ. ನಮ್ಮ ಜನರೆಲ್ಲರೂ ಲಕ್ಷ್ಮಿ ಪೂಜೆಯಲ್ಲಿ ಬ್ಯುಸಿ ಆಗಿದ್ದರು‌. ಅದಕ್ಕಾಗಿ ಮತದಾನ ಮಾಡಲು ಬರಲಿಲ್ಲ. ಅದು ಸಹ ನಾವು ಕಡಿಮೆ ಸ್ಥಾನ ಪಡೆಯಲು ಕಾರಣವಾಗಿದೆ ಎಂದು ಹೇಳಿದ್ದಾರೆ..

bjp-state-general-secretary-n-ravikumar-talk-about-municipal-election-result
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

ಕಲಬುರಗಿ :ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ. ಆದರೂ ನಾವು ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಪಾಲಿಕೆ ಚುನಾವಣಾ ಉಸ್ತುವಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

ನಗರದಲ್ಲಿ ಮಾತನಾಡಿದ ಅವರು,ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ. ಆದರೂ ನಮಗೆ ಎಂಪಿ-ಎಂಎಲ್ಎ ಪಕ್ಷೇತರ ಅಭ್ಯರ್ಥಿ ಸೇರಿ 30 ಆಗುತ್ತವೆ. ಜೆಡಿಎಸ್ ಬೆಂಬಲ ಕೇಳುತ್ತೇವೆ. ಅವರ ಬೆಂಬಲದೊಂದಿಗೆ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದ್ದಾರೆ.

ಜೆಡಿಎಸ್, ಕಾಂಗ್ರೆಸ್​ಗೆ ಬೆಂಬಲ ಕೊಡಲ್ಲ ಅನ್ನೋ ವಿಶ್ವಾಸ ಇದೆ. ಅವರ ಜೊತೆಗೆ ಮಾತುಕತೆ ಮಾಡಿ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ. ಜೆಡಿಎಸ್ ಮುಖಂಡರಿಗೆ ರಿಕ್ಷೆಸ್ಟ್​ ಮಾಡುತ್ತೇವೆ. ಈಗಾಗಲೇ ಜೆಡಿಎಸ್ ಮುಖಂಡರ ಜೊತೆಗೆ ಮಾತುಕತೆ ನಡೆಯುತ್ತಿದೆ. ಬೆಂಬಲಿಗರೊಂದಿಗೆ ಪಾಲಿಕೆ ಅಧಿಕಾರ ಹಿಡಿಯುತ್ತೇವೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್

ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಕಾಂಗ್ರೆಸ್‌ಗೆ ಕಲಿಸಿದ ಪಾಠವಾಗಿದೆ. ಈ ಫಲಿತಾಂಶ ನೋಡಿದ್ರೆ ಕಲಬುರಗಿ ಮತ್ತು ಉತ್ತರ ಕರ್ನಾಟಕ ಜನ ಬಿಜೆಪಿ ಪರ ಇದ್ದಾರೆ ಎಂದು ಸ್ಪಷ್ಟವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರಂಸಿಂಗ್​ರಂತಹ ನಾಯಕರುಳ್ಳ ಕಲಬುರಗಿ ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ಈ ಬಾರಿ ಭಾರತಿಯ ಜನತಾ ಪಕ್ಷ ಹೆಚ್ಚು ಸ್ಥಾನ ಗೆದ್ದಿದೆ. ಇಂತಹ ಕಾಂಗ್ರೆಸ್ ಕೋಟೆಯನ್ನ ಬೇಧಿಸಿ ಬಿಜೆಪಿಗೆ ಜನ ಬೆಂಬಲಿಸಿದ್ದಾರೆ ಎಂದರು.

ಜೆಡಿಎಸ್‌ಗೆ ನಾಲ್ಕು ಜನ ಸದಸ್ಯರಿಗೆ ಬೆಂಬಲ ನೀಡಲು ಮನವಿ ಮಾಡಿದ್ದೇವೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆ ಪ್ರಾರಂಭವಾಗಿದೆ. ನೂರಕ್ಕೆ ನೂರರಷ್ಟು ಕಲಬುರಗಿ ಪಾಲಿಕೆ ಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ. ಕಲಬುರಗಿಗೆ ಸಚಿವ ಸ್ಥಾನ ಸಿಗದಿರೋದು ಎಲ್ಲೋ ಒಂದು ಕಡೆ ಹಿನ್ನಡೆಯಾಗಿರಬಹುದು. ಇತ್ತ ವಾಡಿ ಪುರಸಭೆ ಎರಡು ವಾರ್ಡ್‌ಗಳ ಉಪ ಚುನಾಣೆಯಲ್ಲಿ ಸಹ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು‌.

ಅಪರೇಷನ್ ಕಮಲ ನಡೆಯುವುದಿಲ್ಲ:ಕಲಬುರಗಿಯಲ್ಲಿ ಕಮಲ ಅರಳೇ ಅರಳುತ್ತೆ. ಆದರೆ, ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡುವುದಿಲ್ಲ. ಶುಕ್ರವಾರ ಮತದಾನ ಇದ್ದ ಕಾರಣ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದೆ. ನಮ್ಮ ಜನರೆಲ್ಲರೂ ಲಕ್ಷ್ಮಿ ಪೂಜೆಯಲ್ಲಿ ಬ್ಯುಸಿ ಆಗಿದ್ದರು‌. ಅದಕ್ಕಾಗಿ ಮತದಾನ ಮಾಡಲು ಬರಲಿಲ್ಲ. ಅದು ಸಹ ನಾವು ಕಡಿಮೆ ಸ್ಥಾನ ಪಡೆಯಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಓದಿ:ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಜೈ ಎಂದ ಸಚಿವ ವಿ ಸೋಮಣ್ಣ

ABOUT THE AUTHOR

...view details