ಕರ್ನಾಟಕ

karnataka

ETV Bharat / state

ಕಾರಜೋಳ, ಮಾದಾರ ಚನ್ನಯ್ಯ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ - ಕಲಬುರಗಿ

ಕೊರೊನಾ ಸೋಂಕಿಗೆ ಗುರಿಯಾಗಿರುವ ಡಿಸಿಎಂ ಗೋವಿಂದ ಕಾರಜೋಳ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಶೀಘ್ರ ಗುಣಮುಖರಾಗಲೆಂದು ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ವಿಜಯ ಕುಮಾರ ಆಡಕಿ ನೇತೃತ್ವದಲ್ಲಿ ಶ್ರೀ ದಾನಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Sri Danamma Devi temple
ಶ್ರೀ ದಾನಮ್ಮ ದೇವಿಗೆ ವಿಶೇಷ ಪೂಜೆ

By

Published : Sep 23, 2020, 11:32 PM IST

ಸೇಡಂ:ಕೊರೊನಾ ಸೋಂಕಿಗೆ ಗುರಿಯಾಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಶೀಘ್ರ ಗುಣಮುಖರಾಗಲಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ವಿಜಯ ಕುಮಾರ ಅಡಕಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

ಇಲ್ಲಿನ ಕಲಬುರಗಿ ರಸ್ತೆಯಲ್ಲಿರುವ ಶ್ರೀ ದಾನಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ತಮ್ಮ ನೆಚ್ಚಿನ ನಾಯಕ ಗೋವಿಂದ ಕಾರಜೋಳ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ ಚಿಮ್ಮನಚೋಡ್ಕರ್, ನಗರಾಧ್ಯಕ್ಷ ಅನೀಲ ಐನಾಪೂರ, ಶ್ರೀನಿವಾಸ ಕೊಬ್ರಿ, ಶ್ರೀಮಂತ ಅವಂಟಿ, ಅನಂತಪ್ಪ, ಓಂಪ್ರಕಾಶ ಪಾಟೀಲ, ಅನೀಲ ರನ್ನೆಟ್ಲಾ , ನಿತ್ಯಾನಂದ ವಾಲಿಕಾರ ಇನ್ನಿತರರು ಇದ್ದರು.

ABOUT THE AUTHOR

...view details