ಕಲಬುರಗಿ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಾಗೂ ಬಿಎಲ್ ಸಂತೋಷ್ ಹಸ್ತಕ್ಷೇಪ ಮಾಡ್ತಿಲ್ಲ. ಅವರ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರಿಗಾದರೂ ಅಸಮಾಧಾನವಿದ್ದರೆ ರಾಜ್ಯಾಧ್ಯಕ್ಷರಾದ ನನ್ನ ಬಳಿ ಹೇಳಿಕೊಳ್ಳಬೇಕಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಇದ್ರೇ.... ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ - ಕಲಬುರಗಿ ಸುದ್ದಿ
ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡದಿರುವ ವಿಚಾರ ಬಗ್ಗೆ ಮಾತನಾಡಿದ ಕಟೀಲ್, ನಮ್ಮ ಪಕ್ಷದಲ್ಲಿ ಎಲ್ಲ ಭಾಗಕ್ಕೂ ಪ್ರಾತಿನಿಧ್ಯತೆ ಸಿಗಲಿದೆ ಎಂದು ಸಮಜಾಯಿಸಿ ನೀಡಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಶಾಸಕರಲ್ಲಿಯೂ ಅಸಮಾಧಾನವಿಲ್ಲ, ಗುಂಪುಗಾರಿಕೆ ಪ್ರಶ್ನೆಯೇ ಇಲ್ಲ ಎಂದರು. ಮೊನ್ನೆ ನಾವು ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಶಾಸಕಾಂಗ ಪಕ್ಷದ ಸಭೆ ಮಾಡಿದ್ದೆವು. ಎಲ್ಲರೂ ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ನಿನ್ನೆ ಸಭೆ ಸೇರಿ ಬಜೆಟ್ನಲ್ಲಿ ಏನೇನು ಸೇರಿಸಬೇಕೆಂದು ಮಾತುಕತೆ ಮಾಡಿದ್ದಾರೆ. ಇದನ್ನು ಗುಂಪುಗಾರಿಕೆ ಅಂತಾ ಹೇಳೋಕೆ ಸಾಧ್ಯವಿಲ್ಲ ಎಂದು ಜಗದೀಶ್ ಶೆಟ್ಟರ್ ಮನೆಯಲ್ಲಿ ನಡೆದ ಶಾಸಕರ ಸಭೆಯ ಬಗ್ಗೆ ಸಮರ್ಥಿಸಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡದಿರುವ ವಿಚಾರ ಬಗ್ಗೆ ಮಾತನಾಡಿದ ಕಟೀಲ್, ನಮ್ಮ ಪಕ್ಷದಲ್ಲಿ ಎಲ್ಲ ಭಾಗಕ್ಕೂ ಪ್ರಾತಿನಿಧ್ಯತೆ ಸಿಗಲಿದೆ ಎಂದು ಸಮಜಾಯಿಸಿ ನೀಡಿದರು.