ಕರ್ನಾಟಕ

karnataka

ETV Bharat / state

ನಿನ್ನೆಯಷ್ಟೇ ಸಿಎಂ ಕಾರ್ಯಕ್ರಮದಲ್ಲಿ ಭಾಗಿ: ರಾತ್ರಿ ಮರ್ಮಾಂಗಕ್ಕೆ ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ - ನಿನ್ನೆ ಸಿಎಂ ಕಾರ್ಯಕ್ರಮದಲ್ಲಿ ಭಾಗಿ

ಅಂಗಡಿಯಲ್ಲಿ ಮಲಗಿದ್ದ ಬಿಜೆಪಿ ಮುಖಂಡನನ್ನು ದುಷ್ಕರ್ಮಿಗಳು ಮರ್ಮಾಂಗಕ್ಕೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

BJP leader murder  BJP leader murder in Kalaburagi  ಮರ್ಮಾಂಗಕ್ಕೆ ಚಾಕು ಇರಿದು ಬರ್ಬರವಾಗಿ ಕೊಲೆ  BJP leader Mallikarjun Mutyala murder  ಮರ್ಮಾಂಗಕ್ಕೆ ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ  ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರವಾಗಿ ಹತ್ಯೆ  ಅಂಗಡಿಯಲ್ಲಿ ಮಲಗಿದ್ದಾಗ ನುಗ್ಗಿದ ದುಷ್ಕರ್ಮಿಗಳು  ಕುತ್ತಿಗೆ ಹಗ್ಗ ಬಿಗಿದು ಕೊಲೆಗೈದು ಪರಾರಿ
ಮರ್ಮಾಂಗಕ್ಕೆ ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ

By

Published : Nov 15, 2022, 1:30 PM IST

Updated : Nov 15, 2022, 1:51 PM IST

ಕಲಬುರಗಿ: ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ್ ಮುತ್ಯಾಲ (64) ಎಂದು ಗುರುತಿಸಲಾಗಿದೆ.

ಕೋಲಿ ಕಬ್ಬಲಿಗ ಸಮಾಜದ ತಾಲೂಕು ಘಟಕದ ಮುಖಂಡರಾಗಿದ್ದ ಮಲ್ಲಿಕಾರ್ಜುನ್, ಸೇಡಂ ಪಟ್ಟಣದಲ್ಲಿ ವಿಷ್ಣು ಹೆಸರಿ‌ನಲ್ಲಿ ಎಲೆಕ್ಟ್ರಾನಿಕ್ ಅಂಗಡಿ ಹೊಂದಿದ್ದರು. ರಾತ್ರಿ ಅಂಗಡಿಯಲ್ಲಿಯೇ ಮಲಗುತ್ತಿದ್ದರಂತೆ. ಎಂದಿನಂತೆ ಕಳೆದ ರಾತ್ರಿಯೂ ಅಂಗಡಿಯಲ್ಲಿ ನಿದ್ರಿಸುತ್ತಿದ್ದಾಗ ನುಗ್ಗಿದ ದುಷ್ಕರ್ಮಿಗಳು ಮರ್ಮಾಂಗಕ್ಕೆ ಚಾಕು ಇರಿದು, ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದು ಪರಾರಿಯಾಗಿದ್ದಾರೆ.

ಕೊಲೆಯಾದ ಮಲ್ಲಿಕಾರ್ಜುನ್ ಮುತ್ಯಾಲ ಈ ಮುನ್ನ ಜೆಡಿಎಸ್​ನಲ್ಲಿದ್ದರು. ಇತ್ತೀಚೆಗಷ್ಟೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ನಿನ್ನೆ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಅಂಗಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ನುಗ್ಗಿದ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಭೇಟಿ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇದನ್ನೂ ಓದಿ:ಗಾಜಿಯಾಬಾದ್‌ನಲ್ಲಿ ನೇಣು ಬಿಗಿದು ನಾಯಿಯನ್ನು ಕೊಂದ ಪಾಪಿಗಳು! ವಿಡಿಯೋ

Last Updated : Nov 15, 2022, 1:51 PM IST

ABOUT THE AUTHOR

...view details