ಕಲಬುರಗಿ:ಜಿಲ್ಲಾ ರಾಜಕಾರಣದಲ್ಲಿ ಗನ್ ಹಿಡಿದು ಶೂಟ್ ಮಾಡುವ ಮಾತಿನ ಮಟ್ಟಿನ ರಾಜಕಾರಣ ನಡೆದಿದೆ. ಬಿಜೆಪಿಯವರಿಗೆ ಓಡಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ನೀವು ಎಕೆ 47ನಿಂದ ಶೂಟ್ ಮಾಡಿದರೂ ನಾವು ಸಾಯಲು ಸಿದ್ಧ ಮತ್ತು ಶೂಟ್ ಮಾಡಲೂ ಸಿದ್ಧ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ನಿಮಗೆ (ಬಿಜೆಪಿಯವರಿಗೆ) ನಿಜವಾಗಿ ರಾಜಕೀಯ ಮಾಡಬೇಕೆಂದರೇ, ನಿಮಗಿಂತ ನೂರು ಪಟ್ಟು ರಾಜಕೀಯ ಮಾಡುವ ಅನುಭವ ನಮಗೂ ಇದೆ. ನೀವು (ಬಿಜೆಪಿಯವರು) ಹೇಗೆಲ್ಲ ಮಾಡಿದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ನವರು ಸತ್ತೋಗಿಲ್ಲ. ನಾವು ಮನಸ್ಸು ಮಾಡಿದರೆ ಬಿಜೆಪಿ ನಾಯಕರಿಗೆ ಓಡಾಡಲು ಬಿಡೋದಿಲ್ಲ ಎಂದು ಹೇಳಿದ್ದರು.