ಕಲಬುರಗಿ : ಬಿಜೆಪಿ ಮುಖಂಡನೋರ್ವ ತಲ್ವಾರ್ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚಚೆರ್ಗೆ ಕಾರಣವಾಗಿದೆ.
ತಲ್ವಾರ್ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಮುಖಂಡ: ಫೋಟೋ ವೈರಲ್ - ಬಿಜೆಪಿ ಮುಖಂಡ
ಸ್ಥಳೀಯ ಬಿಜೆಪಿ ಮುಖಂಡನೊಬ್ಬ ತಲ್ವಾರ್ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಫೋಟೋ ವೈರಲ್
ಎರಡು ದಿನಗಳ ಹಿಂದೆ ಜೇವರ್ಗಿ ಪಟ್ಟಣದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಮುಖಂಡ ಶರಣು ಕೋಳಕೂರ, ಅಭಿಮಾನಿಗಳು ತಂದಿದ್ದ ಕೇಕ್ ತಲ್ವಾರ್ನಿಂದ ಕಟ್ ಮಾಡಿದ್ದಾರೆ. ಬಳಿಕ ಬೆಂಬಲಿಗರೊಂದಿಗೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಸಹೋದರ ಬಸವರಾಜ ಪಾಟೀಲ್ ಸಹ ಪಾಲ್ಗೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.