ಕಲಬುರಗಿ: ಚಿತ್ತಾಪೂರ ಪೋಸ್ಟರ್ ವಾರ್ ತಾರಕಕ್ಕೇರಿದೆ. ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡಲು ಸಿದ್ದ ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ ರಾಠೋಡರನ್ನು ಹೈದರಾಬಾದ್ನಲ್ಲಿ ಬಂಧಿಸಿರುವ ಕಲಬುರಗಿ ಪೊಲೀಸರು ಬ್ರಹ್ಮಪುರ ಠಾಣೆಗೆ ಕರೆ ತಂದಿದ್ದಾರೆ.
'ನಾವು ದೇಶ ಕಾಯುವ ಸೈನಿಕರಿದ್ದಂಗೆ. ಪ್ರಿಯಾಂಕ್ ಖರ್ಗೆ ನಮ್ಮ ಮೇಲೆ ಗುಂಡು ಹೊಡೆದರೂ ಎದುರಿಸಲು ಸಿದ್ಧ. ಹಾಗೆಯೇ ಅವರನ್ನು ಶೂಟ್ ಮಾಡಲೂ ಸಿದ್ಧ' ಎಂದು ಮಣಿಕಂಠ ರಾಠೋಡ ವಿವಾದಿತ ಹೇಳಿಕೆ ನೀಡಿದ್ದರು.