ಕಲಬುರಗಿ:ಬಿಜೆಪಿ ದ್ವೇಷದ ರಾಜಕಾರಣ ಮಾಡಿಲ್ಲ. ಅನುದಾನದ ವಿಷಯದಲ್ಲಿಯೂ ಪಾಲಿಟಿಕ್ಸ್ ಮಾಡುತ್ತಿಲ್ಲ ಎಂದು ಸಂಸದ ಡಾ.ಉಮೇಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ದ್ವೇಷದ ರಾಜಕಾರಣ ಮಾಡಿಲ್ಲ.. ಕಲಬುರ್ಗಿ ಸಂಸದ ಉಮೇಶ್ ಜಾಧವ್
ಬಿಜೆಪಿ ದ್ವೇಷದ ರಾಜಕಾರಣ ಮಾಡಿಲ್ಲ. ಅನುದಾನದ ವಿಷಯದಲ್ಲಿಯೂ ಪಾಲಿಟಿಕ್ಸ್ ಮಾಡುತ್ತಿಲ್ಲ ಎಂದು ಸಂಸದ ಡಾ.ಉಮೇಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ತಾರತಮ್ಯ ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ದ್ವೇಷದ ರಾಜಕಾರಣ ಗೊತ್ತಿಲ್ಲ. ಯಾರ ವಿರುದ್ಧವಾದರೂ ಸುಳ್ಳು ಕೇಸು ದಾಖಲಿಸಿದೆಯೇ? ಯಾರನ್ನಾದರೂ ವಿನಾಕಾರಣ ಜೈಲಿಗೆ ಕಳುಹಿಸಲಾಗಿದೆಯೇ? ಎಂದು ಉಮೇಶ್ ಜಾಧವ್ ಪ್ರಶ್ನಿಸಿದ್ದಾರೆ.
ಕೆಲವೆಡೆ ನೆರೆ ಕಾರಣಕ್ಕಾಗಿ ಹಣವನ್ನು ಆ ಕಡೆ ಡೈವರ್ಟ್ ಮಾಡಿರಬಹುದು. ಹಾಗೆಂದು ಅನುದಾನ ಹಂಚಿಕೆಯಲ್ಲಿ ಬಿಜೆಪಿ–ಕಾಂಗ್ರೆಸ್ ಶಾಸಕರೆಂದು ತಾರತಮ್ಯ ಮಾಡುತ್ತಿಲ್ಲ. ಪ್ರಿಯಾಂಕ್ ಖರ್ಗೆ ಬೇಕಿದ್ದರೆ ಹೋರಾಟ ಮಾಡಲಿ, ನಾವು ಎದುರಿಸಲು ಸಿದ್ಧರಿದ್ದೇವೆ. ಕಾನೂನು ಹೋರಾಟ ಮಾಡಲಿ ಅಥವಾ ರಸ್ತೆಗಿಳಿದು ಹೋರಾಟ ಮಾಡಲಿ. ಅವರ ಹೋರಾಟ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಜಾಧವ್ ಸವಾಲು ಹಾಕಿದ್ದಾರೆ.