ಕರ್ನಾಟಕ

karnataka

ETV Bharat / state

ಮೂವರು ಕಳ್ಳರ ಬಂಧನ: 6 ಲಕ್ಷ ರೂ. ಮೌಲ್ಯದ 15 ಬೈಕ್​ ವಶ

ತಿಂಗಳಿಂದ ಬೈಕ್ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದ ಹಿನ್ನೆಲೆ ತೀವ್ರ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿ ಜೈಲಿಗಟ್ಟಿರುವ ಕ್ರೈಂ ಪಿಎಸ್ಐ ಅಯ್ಯಪ್ಪ ಅವರ ಹೆಸರನ್ನು ಇಲಾಖೆಯ ರಿವಾರ್ಡ್ ರೋಲ್​​ಗೆ ಕಳುಹಿಸುವಂತೆ ಡಿವೈಎಸ್ಪಿ ವೀರಭದ್ರಯ್ಯ, ಸಿಪಿಐ ರಾಜಶೇಖರ ಹಳಗೋದಿ ಅವರಿಗೆ ಸೂಚಿಸಿದರು.

Bike thieves arrested in sedam
Bike thieves arrested in sedam

By

Published : Jul 4, 2020, 6:31 PM IST

ಸೇಡಂ(ಕಲಬುರಗಿ):ಕೆಲ ತಿಂಗಳುಗಳಿಂದ ತಾಲೂಕಿನ ವಿವಿದೆಢೆ ಕಳ್ಳತನ ಕೃತ್ಯ ಎಸಗುತ್ತಿದ್ದ ಬೈಕ್ ಕಳ್ಳರೀಗ ಪೊಲೀಸರ ಅತಿಥಿಯಾಗಿದ್ದಾರೆ.

ಅಪರಾಧ ವಿಭಾಗದ ಪಿಎಸ್ಐ ಅಯ್ಯಪ್ಪ, ಪಿಎಸ್ಐ ಸುಶೀಲಕುಮಾರ ನೇತೃತ್ವದ ತಂಡ ಕೊನೆಗೂ ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹುಮನಾಬಾದ್​, ಯಾದಗಿರಿ, ಕಲಬುರಗಿ ಸೇರಿದಂತೆ ಸೇಡಂನ ಅನೇಕ ಕಡೆಗಳಲ್ಲಿ ಬೈಕ್​​ಗಳನ್ನು ಕದ್ದಿದ್ದ ಖದೀಮರು, ನಂಬರ್ ಪ್ಲೇಟ್ ಮತ್ತು ಬೈಕ್‌ ಕಲರ್ ಬದಲಾಯಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ನಿರಂತರ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆ ಡಿವೈಎಸ್ಪಿ ವೀರಭದ್ರಯ್ಯ, ಸಿಪಿಐ ರಾಜಶೇಖರ ಹಳಗೋದಿ ಮಾರ್ಗದರ್ಶನದಲ್ಲಿ ಪಿಎಸ್ಐ ಅಯ್ಯಪ್ಪ ಕಳ್ಳರ ಬೇಟೆಗೆ ಇಳಿದಿದ್ದರು. ಮನೆಯ ಎದುರುಗಡೆ ನಿಲ್ಲಿಸುವ ಬೈಕ್​​ಗಳನ್ನೇ ನೇರವಾಗಿ ಟಾರ್ಗೆಟ್ ಮಾಡುತ್ತಿದ್ದ ಕಳ್ಳರ ಗ್ಯಾಂಗ್, ಪೊಲೀಸರು ಸಂಚರಿಸದ ಸಮಯದಲ್ಲೇ ತಮ್ಮ ಕೈಚಳಕ ತೋರಿಸುತ್ತಿತ್ತು. ಒಟ್ಟಾರೆಯಾಗಿ ಖದೀಮರ ಗ್ಯಾಂಗ್​​ನ ಮೂರು ಜನರನ್ನು ಬಂಧಿಸಲಾಗಿದ್ದು, 6 ಲಕ್ಷ ಮೌಲ್ಯದ 15 ಬೈಕ್​​ಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿತರಾದ ಮೀನಹಾಬಾಳ ಗ್ರಾಮದ ಬಾಲರಾಜ ವೀರಭದ್ರಪ್ಪ ಲವಂಗನೋರ (22), ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಗ್ರಾಮದ ನಾಗರಾಜ ಸಂಗಪ್ಪ (29), ಹುಮನಾಬಾದ ತಾಲೂಕಿನ ವೀರಾರೆಡ್ಡಿ ಅರ್ಜುನರೆಡ್ಡಿ ಗಡ್ಡದವರ (23) ಎಂಬ ಮೂರು ಜನರನ್ನು ಬಂಧಿಸಿದ್ದು, ವಿಜಯಕುಮಾರ ಮತ್ತು ರಾಹುಲ ಎಂಬುವರ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details