ಕಲಬುರಗಿ: ಸ್ಟೇಷನ್ ಬಜಾರ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಬೈಕ್ ಕಳ್ಳತನದಲ್ಲಿ ತೊಡಗಿದ್ದ ವಿದ್ಯಾರ್ಥಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಬೈಕ್ ಕಳ್ಳತನದಲ್ಲಿ ತೊಡಗಿದ್ದ ವಿದ್ಯಾರ್ಥಿ ಸೇರಿ ಮೂವರ ಬಂಧನ - ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ
ನಗರದಲ್ಲಿ ಬೈಕ್ ಕಳ್ಳತನದಲ್ಲಿ ತೊಡಗಿದ್ದ ವಿದ್ಯಾರ್ಥಿ ಸೇರಿ ಮೂವರು ಆರೋಪಿಗಳನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ವಿಶ್ವನಾಥ ಹಂಗರಗಿ (19), ಮಲ್ಲಿಕಾರ್ಜುನ್ ಮಲಬುದ್ದಿ (23) ಹಾಗೂ ಭಗವಂತ ಪೂಜಾರಿ (22) ಬಂಧಿತ ಆರೋಪಿಗಳು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 28 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಲ್ಬುರ್ಗಿ ನಿವಾಸಿಗಳಾಗಿದ್ದು, ಇಬ್ಬರು ಮೊಬೈಲ್ ರಿಪೇರಿ ಕೆಲಸ, ಇನ್ನೋರ್ವ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಕೆಲ ದಿನಗಳಿಂದ ಮೂವರು ಸೇರಿ ಕಲ್ಬುರ್ಗಿಯ ಖುಬಾ ಪ್ಲಾಟ, ಸಿಐಬಿ ಕಾಲೋನಿ, ಗೊದುತಾಯಿ ನಗರ, ಸಾಯಿ ಮುಂದಿರ, ಸಂತೋಷ ಕಾಲೋನಿ, ಬ್ರಹ್ಮಪೂರ, ಚೌಡೇಶ್ವರ ಕಾಲೋನಿ ಮತ್ತು ಸೂಪರ್ ಮಾರ್ಕೆಟ್ ಏರಿಯಾಗಳಲ್ಲಿ ಬೈಕ್ ಕಳ್ಳತನ ಮಾಡಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದರು.