ಕಲಬುರಗಿ:ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾದ ಘಟನೆ ಜಂಬಗಾ ಕ್ರಾಸ್ ಬಳಿ ನಡೆದಿದೆ.
ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ಗಳ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಸೈನಿಕ ಸಾವು! - ಮೃತವ್ಯಕ್ತಿ ಆರ್ಮಿಯಲ್ಲಿ ಸೈನಿಕ
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು, ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ. ಈ ಘಟನೆ ಕಲಬುರಗಿಯ ಜಂಬಗಾ ಕ್ರಾಸ್ ಬಳಿ ನಡೆದಿದೆ.
![ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ಗಳ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಸೈನಿಕ ಸಾವು!](https://etvbharatimages.akamaized.net/etvbharat/prod-images/768-512-4775540-thumbnail-3x2-klb.jpg)
ಬೈಕ್ಗಳ ಮುಖಾಮುಖಿ ಡಿಕ್ಕಿ
ಬಸ್ ಓವರ್ ಟೇಕ್ ಮಾಡಲು ಹೋದಾಗ ಎದುರಿಗೆ ಮತ್ತೊಂದು ಬೈಕ್ ಬಂದಿದೆ. ಬಳಿಕ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎನ್ನಲಾಗ್ತಿದೆ. ಮೃತನ ಬಗ್ಗೆ ನಿಖರವಾದ ಗುರುತು ಪತ್ತೆಯಾಗಿಲ್ಲ. ಆದ್ರೆ ಮೃತ ವ್ಯಕ್ತಿ ಆರ್ಮಿಯಲ್ಲಿ ಸೈನಿಕನಾಗಿದ್ದನೆಂದು ತಿಳಿದುಬಂದಿದೆ.
ಇನ್ನೋರ್ವ ಗಾಯಾಳು ಶಾಂತಕುಮಾರ ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಣಾಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.