ಕಲಬುರಗಿ : ಬೈಕ್ ಹಾಗೂ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರ್ ಚಾಲಕ ಹಾಗೂ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಂಚೋಳಿ ಹೊರವಲಯದ ಮೈಲಾರಲಿಂಗ ದೇವಸ್ಥಾನ ಬಳಿ ನಡೆದಿದೆ.
ಬೈಕ್ -ಕಾರ್ ನಡುವೆ ಭೀಕರ ಅಪಘಾತ : ಮೂವರ ದಾರುಣ ಸಾವು - ಕಲಬುರಗಿ ಜಿಲ್ಲಾ ಸುದ್ದಿ
ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಕಾರು ಚಾಲಕ ಶಕೀಲ್ಬಾಬು (41) ಹಾಗೂ ದೇಗಲಮಡಿ ಗ್ರಾಮದ ಬೈಕ್ ಸವಾರ ಮಲ್ಲಪ್ಪ (23) ಸ್ಥಳದಲ್ಲೇ ಮೃತ ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಬೈಕ್ ಹಿಂಬದಿ ಸವಾರ ನಾಶೀರ್ ಕೊರಬಾ (21) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
![ಬೈಕ್ -ಕಾರ್ ನಡುವೆ ಭೀಕರ ಅಪಘಾತ : ಮೂವರ ದಾರುಣ ಸಾವು](https://etvbharatimages.akamaized.net/etvbharat/prod-images/768-512-4686734-thumbnail-3x2-accieent.jpg)
ಬೈಕ್ ಮತ್ತು ಕಾರಿನ ನಡವೆ ಭೀಕರ ಅಪಘಾತ
ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಕಾರು ಚಾಲಕ ಶಕೀಲ್ಬಾಬು (41) ಹಾಗೂ ದೇಗಲಮಡಿ ಗ್ರಾಮದ ಬೈಕ್ ಸವಾರ ಮಲ್ಲಪ್ಪ (23) ಸ್ಥಳದಲ್ಲೇ ಮೃತ ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಹಿಂಬದಿ ಸವಾರ ನಾಶೀರ್ ಕೊರಬಾ (21) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೈದರಾಬಾದ್ನಿಂದ ಗಡಿಕೇಶ್ವರ ಗ್ರಾಮಕ್ಕೆ ಹೊರಟಿದ್ದ ಕಾರು, ಚಿಂಚೋಳಿಯಿಂದ ದೇಗಲಮಡಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.