ಕಲಬುರಗಿ: ಕಳೆದ ಒಂದು ವಾರದಿಂದ ಖಾಲಿ ಇದ್ದ ಕಲಬುರಗಿ ಮಹಾನಗರ ಪಾಲಿಕೆ ಕಮಿಷನರ್ ಸ್ಥಾನಕ್ಕೆ ಭುವನೇಶ ಪಾಟೀಲ್ ಅವರನ್ನು ಸರ್ಕಾರ ನಿಯೋಜಿಸಿದ್ದು, ಇಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಇದ್ದ ಕಮಿಷನರ್ ಶಂಕ್ರಣ್ಣ ವಣಿಕ್ಯಾಳ ಭ್ರಷ್ಟಾಚಾರದ ಆರೋಪದಡಿ ಸಿಕ್ಕಿಬಿದ್ದಿದ್ದಾರೆ. ಅವರಿಂದ ತೆರವಾಗಿದ್ದ ಕಮಿಷನರ್ ಸ್ಥಾನಕ್ಕೆ ಭುವನೇಶ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.