ಕಲಬುರಗಿ: ಭಾರಿ ಮಳೆ ಮತ್ತು ನದಿಯ ಪ್ರವಾಹ ನಿಂತರೂ ಭೀಮಾ ನದಿ ಪಾತ್ರದ ಕೆಲವು ಗ್ರಾಮಗಳ ನಿವಾಸಿಗರು ಪ್ರವಾಹದ ಭೀತಿಯಿಂದ ಹೊರಬಂದಿಲ್ಲ. ಆದರೂ ಗ್ರಾಮ ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ.
ಭೀಮಾ ನದಿಯಲ್ಲಿ ನೀರಿನ ಹರಿವು ಕೊಂಚ ತಗ್ಗಿದೆ. ಆದರೆ ಪ್ರವಾಹದ ಅಬ್ಬರ ಮಾತ್ರ ನಿಂತಿಲ್ಲ. ಜೇವರ್ಗಿ ತಾಲೂಕಿನ ಕೊನಹಿಪ್ಪರಗಾ ಗ್ರಾಮ ಭೀಮೆಯ ಪ್ರವಾಹಕ್ಕೆ ಸಂಪೂರ್ಣ ಜಲಾವೃತವಾಗಿದೆ. ಅಧಿಕಾರಿ ಜನಪ್ರತಿನಿಧಿಗಳ ಸತತ ಪ್ರಯತ್ನದಿಂದ ಗ್ರಾಮದ ಒಂದಿಷ್ಟು ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ.
ಪ್ರವಾಹದಲ್ಲಿ ಕೊನಹಿಪ್ಪರಗಾ ಗ್ರಾಮ ಆದರೆ, ಗ್ರಾಮದ ಇನ್ನೊಂದಿಷ್ಟು ಜನರು ಯಾರ ಮಾತಿಗೂ ಬೆಲೆ ಕೊಡದೆ, ಪ್ರಾಣ ಭಯ ಬಿಟ್ಟು ಗ್ರಾಮದಲ್ಲಿಯೇ ಉಳಿದುಕೊಂಡಿದ್ದಾರೆ. ನಮಗೆ ಉಳಿದುಕೊಳ್ಳಲು ಜಾಗ ಕೊಡುತ್ತಾರೆ. ಜಾನುವಾರುಗಳಿಗೆ ಆಶ್ರಯ ಯಾರು ನೀಡುತ್ತಾರೆ. ಅವುಗಳಿಗೆ ನಾವೇ ರಕ್ಷಣೆ ಮಾಡಬೇಕು ಎಂದು ಗ್ರಾಮ ಬಿಡಲು ನಿರಾಕರಿಸಿದರು.
ಗ್ರಾಮಸ್ಥರನ್ನು ಎನ್ಡಿಆರ್ಎಫ್ ತಂಡ ಹಾಗೂ ಈಟಿವಿ ಭಾರತಪ್ರವಾಹದಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ತಿಳಿ ಹೇಳಿದ ಬಳಿಕ ಕೆಲವು ಗ್ರಾಮಸ್ಥರು ಒಲ್ಲದ ಮನಸ್ಸಿನಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಿದರು.