ಕಲಬುರಗಿ: ಭೀಮಾ ನದಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಹಾಗರಗುಂಡಗಿ ಗ್ರಾಮಕ್ಕೆ ನುಗ್ಗಿದ ಭೀಮಾ ನದಿ ನೀರು
ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮಕ್ಕೆ ಭೀಮಾ ನದಿ ನೆರೆ ನೀರು ಅಪ್ಪಳಿಸಿದ್ದು, ಗ್ರಾಮದ ಜನರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ.
ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮ
ತಾಲೂಕಿನ ಹಾಗರಗುಂಡಗಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಶರಣು ಬಿದನೂರ ಕುಟುಂಬ ಮತ್ತು ಶ್ರೀದೇವಿ ಮರತೂರ ಕುಟುಂಬ ಮನೆ ತೊರೆಯಬೇಕಾಗಿದೆ. ಎರಡು ಕುಟುಂಬದವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಲಾದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.
ಭೀಮಾ ನದಿ ನೆರೆ ನೀರು ಹೆಚ್ಚಾಗುತ್ತಿದ್ದರಿಂದ ಮುಂಜಾಗೃತ ಕ್ರಮವಾಗಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ತಗ್ಗುವವರೆಗೂ ಪರಿಹಾರ ಕೇಂದ್ರಗಳಲ್ಲಿ ಆಹಾರ ಇನ್ನಿತರೆ ಅನುಕೂಲಗಳನ್ನು ಸರ್ಕಾರ ಮಾಡಿದೆ.