ಕಲಬುರಗಿ:ರೈತರ ಬೆಳೆಗೆ ಬೆಂಬಲ ಬೆಲೆ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಭಾವಾಂತರ ಸ್ಕೀಮ್ ಮೂಲಕ ಅನ್ನದಾತರ ಹಣ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಾಡೆ ಆರೋಪಿಸಿದ್ದಾರೆ.
ಬೆಂಬಲ ಬೆಲೆ ನೀಡುವ ಭಾವಾಂತರ ಸ್ಕೀಂ ರೈತರ ಹಣ ಕೊಳ್ಳೆ ಹೊಡೆಯುವ ಯೋಜನೆ: ಆರೋಪ - latest news of kalburgi
ಭಾವಾಂತರ ಸ್ಕೀಮ್ ರೈತರಿಗೆ ಮಾರಾಕವಾಗಿದ್ದು ರೈತರನ್ನು ಲೂಟಿ ಮಾಡುವ ದುರದ್ದೇಶದಿಂದ ಜಾರಿಗೆ ತರಲಾಗುತ್ತಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಾಡೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರುತಿ ಮಾನ್ಪಾಡೆ, ಭಾವಾಂತರ ಸ್ಕೀಮ್ ರೈತರಿಗೆ ಮಾರಾಕವಾಗಿದ್ದು ಅನ್ನದಾತರನ್ನು ಲೂಟಿ ಮಾಡುವ ದುರದ್ದೇಶದಿಂದ ಜಾರಿ ಮಾಡಲಾಗುತ್ತಿದೆ. ಸರ್ಕಾರ ರೈತರೊಂದಿಗೆ ಚರ್ಚೆ ಮಾಡಿ ಭಾವಾಂತರ ಸ್ಕೀಮ್ ಜಾರಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಇನ್ನೂ ಶೇಕಡಾ ಅರ್ಧದಷ್ಟು ಹೆಸರು ಬೇಳೆ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು ದುರಾದೃಷ್ಟಕರ ಸಂಗತಿ. ಅದರಲ್ಲೂ ಕೇವಲ ರೈತನಿಂದ ನಾಲ್ಕು ಕ್ವಿಂಟಾಲ್ ಮಾತ್ರ ಖರೀದಿಗೆ ಮುಂದಾಗಿದ್ದು ಸರಿಯೇ ಎಂದು ಪ್ರಶ್ನಿಸಿದರು. ಪ್ರತಿ ರೈತರು ಬೆಳೆದ ಸಂಪೂರ್ಣ ಹೆಸರು ಬೇಳೆ ಖರೀದಿಸಬೇಕೆಂದು ಮಾನ್ಪಾಡೆ ಒತ್ತಾಯಿಸಿದರು.