ಕಲಬುರಗಿ:ಕೊರೊನಾ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ನಿರ್ಗತಿಕರು, ಭಿಕ್ಷುಕರು ಅತಂತ್ರರಾಗಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಲಾಕ್ ಡೌನ್ಗೆ ನಲುಗಿದ ಭಿಕ್ಷುಕರು, ನಿರ್ಗತಿಕರು: ವಿಡಿಯೋ
ಕಲಬುರಗಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಕಳೆದ ಇಪ್ಪತ್ತು ದಿನಗಳಿಂದ ಅಂಗಡಿ, ಮುಂಗಟ್ಟು ಬಂದ್ ಮಾಡಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಬಸ್ ಹಾಗೂ ರೈಲು ಸಂಚಾರ ಕೊಡ ಸ್ಥಗಿತಗೊಳಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ರೈಲ್ವೆ ಹಾಗೂ ಬಸ್ ನಿಲ್ದಾಣವನ್ನೇ ಆಶ್ರಯವಾಗಿಸಿಕೊಂಡಿದ್ದ ನಿರ್ಗತಿಕರು ಹಾಗೂ ಭಿಕ್ಷುಕರು ಊಟ ಸಿಗದೇ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿ ಹಾಗೂ ಜಿಲ್ಲೆಯ ವಾಡಿ ಪಟ್ಟಣದ ರೈಲು ನಿಲ್ದಾಣದಲ್ಲಿ ಕಂಡು ಬಂದ ಕರಳು ಕಿವುಚುವ ದೃಶ್ಯಗಳಿವು, ಮಹಾಮಾರಿ ಕೊರೊನಾ ದೇಶವನ್ನೇ ಬೆಚ್ಚಿ ಬಿಳಿಸಿದೆ. ಅಲ್ಲದೇ ಕಲಬುರಗಿಯಲ್ಲಿ ಕೊರೊನಾದಿಂದ ಸಾವು ಸಂಭವಿಸಿದ ಕಾರಣ ಕಳೆದ ಇಪ್ಪತ್ತು ದಿನಗಳಿಂದ ಜನ ಹೊರಗೆ ಬಾರದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸದ್ಯ 144 ಸೆಕ್ಷನ್ ಜಾರಿಯಲ್ಲಿದ್ದು ಕಳೆದ ಇಪ್ಪತ್ತು ದಿನಗಳಿಂದ ಅಂಗಡಿ, ಮುಂಗಟ್ಟು ಬಂದ್ ಮಾಡಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಬಸ್ ಹಾಗೂ ರೈಲು ಸಂಚಾರ ಕೊಡ ಸ್ಥಗಿತಗೊಳಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ರೈಲ್ವೆ ಹಾಗೂ ಬಸ್ ನಿಲ್ದಾಣವನ್ನೇ ಆಶ್ರಯವಾಗಿಸಿಕೊಂಡಿದ್ದ ನಿರ್ಗತಿಕರು ಹಾಗೂ ಭಿಕ್ಷುಕರು ಊಟ ಸಿಗದೆ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಡವರಿಗಾಗಿ ಸರ್ಕಾರ ಇಂದಿರಾ ಕ್ಯಾಂಟಿನ್ನಲ್ಲಿ ಉಚಿತ ಆಹಾರ ವ್ಯವಸ್ಥೆ ಸೇರಿದಂತೆ ವಿವಿಧ ಅನುಕೂಲಗಳು ಕಲ್ಪಿಸಿ ಕೊಡುತ್ತಿದೆಯಾದರೂ, ಅತಂತ್ರ ಸ್ಥಿತಿಯಲ್ಲಿರುವ ನಿರ್ಗತಿಕರು ಹಾಗೂ ಭಿಕ್ಷುಕರ ಸಹಾಯಕ್ಕೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.