ಕರ್ನಾಟಕ

karnataka

ETV Bharat / state

ಕಲಬುರಿಗಿ ಜಿಲ್ಲೆಯಲ್ಲಿ ಈಗ ಬೆಡ್​​​​ಗಳ​​​ ಕೊರತೆ.. ಇನ್ನೂ ಎಚ್ಚೆತ್ತಕೊಳ್ಳದ ಸರ್ಕಾರ, ಆಕ್ರೋಶ - ಕಲಬುರಿಗಿ ಜಿಲ್ಲೆಯಲ್ಲಿ ಈಗ ಬೆಡ್​​​ ಕೊರತೆ

ಕೊರೊನಾ ಎರಡನೇ ಅಲೆ ಶುರುವಾಗುತ್ತಿರೋ ಮುನ್ಸೂಚನೆ ಸಿಕ್ಕರೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ‌ ನಿರ್ಲಕ್ಷ್ಯ ವಹಿಸುತ್ತಿದ್ದರಿಂದ ಇದೀಗ ಕೊವಿಡ್ ರೋಗಿಗಳಿಗೆ ಬೆಡ್‌ಗಳ ಕೊರತೆ ಎದುರಾಗಿದೆ. ಇದು ರೋಗಿಗಳಿಗೆ ಸಂಕಷ್ಟ ದೂಡಿದೆ.

ಕಲಬುರಿಗಿ ಜಿಲ್ಲೆಯಲ್ಲಿ ಈಗ ಬೆಡ್​​​ ಕೊರತೆ
ಕಲಬುರಿಗಿ ಜಿಲ್ಲೆಯಲ್ಲಿ ಈಗ ಬೆಡ್​​​ ಕೊರತೆ

By

Published : Apr 19, 2021, 2:55 PM IST

ಕಲಬುರಗಿ:ಮಹಾಮಾರಿ‌ ಕೊರೊನಾ ವೈರಸ್‌ನ ಎರಡನೇ ಅಲೆಗೆ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಇದರ ನಡುವೆ ನಗರದ ಆಸ್ಪತ್ರೆಗಳಲ್ಲಿ ಸರಿಯಾದ ಬೆಡ್ ವ್ಯವಸ್ಥೆ ಇಲ್ಲದೇ ರೋಗಿಗಳು ಪರದಾಡುತ್ತಿರುವ ದೃಶ್ಯಗಳ ಕಂಡು ಬರುತ್ತಿದ್ದು, ಇದು ಸ್ಥಳೀಯ ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ಎರಡನೇ ಅಲೆ ಶುರುವಾಗುತ್ತಿರೋ ಮುನ್ಸೂಚನೆ ಸಿಕ್ಕರೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ‌ ನಿರ್ಲಕ್ಷ್ಯ ವಹಿಸುತ್ತಿದ್ದಕ್ಕೆ ಇದೀಗ ಕೊವಿಡ್ ರೋಗಿಗಳಿಗೆ ಬೆಡ್‌ಗಳ ಕೊರತೆ ಎದುರಾಗಿದೆ. ಇದು ರೋಗಿಗಳನ್ನು ಸಂಕಷ್ಟ ದೂಡಿದೆ. ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಲಬುರಿಗಿ ಜಿಲ್ಲೆಯಲ್ಲಿ ಈಗ ಬೆಡ್​​​ ಕೊರತೆ

ದೇಶದಲ್ಲಿ ಕೊರೊನಾಗೆ ಮೊದಲ ಬಲಿಯಾದ ಜಿಲ್ಲೆ ಎಂಬ ಅಪಖ್ಯಾತಿಗೆ ಕಾರಣವಾಗಿದ್ದ ಕಲಬುರಗಿ, ಇದೀಗ ಎರಡನೇ ಅಲೆಯ ಗಾಳಿಗೆ ಸಿಲುಕಿ ನಲುಗುತ್ತಿದೆ. ಕೋವಿಡ್ ರೋಗಿಗಳಿಗೆ ಬೆಡ್‌ಗಳ ಕೊರತೆ ಎದುರಾಗಿದೆ. ಅಗತ್ಯಕ್ಕೆ ತಕ್ಕಂತೆ ಬೆಡ್‌ಗಳ ವ್ಯವಸ್ಥೆ ಇಲ್ಲದಿರುವುದಕ್ಕೆ ರೋಗಿಗಳು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೇವಲ 133 ನಾರ್ಮಲ್ ಬೆಡ್, 58 ಐಸಿಯು ಬೆಡ್‌ಗಳಿದ್ದರೆ, ಇಎಸ್‌ಐ ಮೆಡಿಕಲ್ ಹಬ್‌ನಲ್ಲಿ 150 ನಾರ್ಮಲ್ ಬೆಡ್‌ಗಳಿದ್ದರೆ, ಕೇವಲ 30 ಐಸಿಯು ಬೆಡ್‌ಗಳಿವೆ.

ಇನ್ನೂ ಕೊರೊನಾ ಸೊಂಕಿತರ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 15 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಬೆಡ್‌ಗಳನ್ನು ಸೇರಿಸಿದರೂ ಕೇವಲ 529 ಬೆಡ್‌ಗಳು ಮಾತ್ರ ಜಿಲ್ಲೆಯಲ್ಲಿ ಇರೋದು ತೀವ್ರ ಆತಂಕಕ್ಕೆ ಕಾಣವಾಗಿದೆ ಎಂದು ಆರೋಪಿಸಿದರು. ಕೂಡಲೇ ಆರೋಗ್ಯ ಸಚಿವರು ಇತ್ತ ಕಡೆ ಗಮನ ಹರಿಸಿ ಸಂಕಷ್ಟದಲ್ಲಿರುವ ಬಡ ರೋಗಿಗಳಿಗೆ ನೆರವಾಗಬೇಕು ಹಾಗೂ ರೋಗಿಗಳ ನರಳಾಟ ಕಂಡೂ ಕಾಣದಂತೆ ಕಣ್ಣುಮುಚ್ಚಿ ಕೊಳಿತಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ತಿರುಗಿಸುವಂತೆ ಕರವೇ ಕಾರ್ಯಕರ್ತರು ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಕೊರೊನಾಗೆ ಒಂದೇ ಕುಟುಂಬದ ಐವರು ಬಲಿ: ಇದು ಮನಕಲಕುವ ಕಹಾನಿ

For All Latest Updates

ABOUT THE AUTHOR

...view details