ಕಲಬುರಗಿ : ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬದ ಆಚರಣೆಗೆ ಮುಸ್ಲಿಂ ಬಾಂಧವರು ಸಕಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಜೊತೆಗೆ ಬಕ್ರೀದ್ ಹಬ್ಬ ಆಚರಣೆಗೆ ಆಡು, ಕುರಿಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಕುರಿ ವ್ಯಾಪಾರ ಭರದಿಂದ ಸಾಗಿದೆ.
ಬಕ್ರೀದ್ ಹಬ್ಬದ ಹಿನ್ನೆಲೆ ಆಡು,ಕುರಿ, ಮೇಕೆ ಖರೀದಿಯಲ್ಲಿ ತೊಡಗಿರುವ ಮುಸ್ಲಿಂ ಬಾಂಧವರು ಕುರಿ, ಆಡು, ಮೇಕೆ ಮಾರಾಟಕ್ಕೆ ಕಲಬುರಗಿ ಪ್ರಸಿದ್ಧಿ ಪಡೆದಿದೆ. ಬಕ್ರೀದ್ ಹಿನ್ನೆಲೆ ಕುರಿ ವ್ಯಾಪಾರ ಜೋರಾಗಿದ್ದು, ಕುರಿ, ಆಡುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಹಿಂಬದಿಯಲ್ಲಿರೋ ಬಕ್ರಾ ಮಾರ್ಕೆಟ್‌ನಲ್ಲಿ ಆಡು, ಕುರಿಗಳನ್ನು ಖರೀದಿಸಲು ಜನಸಾಗರವೇ ಸೇರಿತ್ತು.
ನಗರದ ಬಕ್ರಾ ಮಾರ್ಕೆಟ್‌ಗೆ ಜಿಲ್ಲೆಯ ಜನರಲ್ಲದೆ ಹೊರ ಜಿಲ್ಲೆಗಳಿಂದಲೂ ಜನರು ಆಗಮಿಸಿ ಕುರಿ, ಆಡುಗಳನ್ನು ಖರೀದಿಸುತ್ತಾರೆ. ಬಕ್ರಾ ಮಾರ್ಕೆಟ್‌ನಲ್ಲಿ 5 ಸಾವಿರ ರೂಪಾಯಿಯಿಂದ ಒಂದು ಲಕ್ಷದವರೆಗಿನ ಕುರಿಗಳು ಮಾರಾಟಕ್ಕಿದ್ದು, ಜವಾರಿ ತಳಿಯ ಕುರಿಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ. ವಿವಿಧ ತಳಿಯ ಆಡು ಕುರಿಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಆಡಿನ ದಷ್ಟ ಪುಷ್ಟತೆ ಆಧಾರದ ಮೇಲೆ ದರ ನಿಗದಿ ಮಾಡಲಾಗ್ತಿದೆ. ಬಕ್ರೀದ್ ಹಬ್ಬದ ನಿಮಿತ್ತ ವಿವಿಧೆಡೆಯಿಂದ ಜನರು ಆಗಮಿಸಿ ಆಡು, ಕುರಿ, ಮೇಕೆಗಳನ್ನು ಖರೀದಿಸುತ್ತಾರೆ.
ಓದಿ :ರಾಜ್ಯಾದ್ಯಂತ ಇಂದು 826 ಮಂದಿಗೆ ಕೋವಿಡ್: ಸಾವು ಶೂನ್ಯ