ಕಲಬುರಗಿ: ಹಿಂದೂ ಜಾತ್ರೆಗಳಲ್ಲಿ ಹಿಂದೂಯೇತರ ವ್ಯಾಪಾರಸ್ಥರಿಗೆ ನಿಷೇಧ ಹೇರುವ ಕೂಗು ರಾಜ್ಯದೆಲ್ಲೆಡೆ ಜೋರಾಗುತ್ತಿದೆ. ಈ ಬೆನ್ನಲ್ಲೇ ಕಲಬುರಗಿಯಲ್ಲಿ ಹಿಂದೂ ಮಹಿಳೆಯರಿಂದ ನಗರದ ಪ್ರಸಿದ್ಧ ಶ್ರೀ ಶರಣ ಬಸವೇಶ್ವರರ ದೇವಸ್ಥಾನ ಆವರಣದಲ್ಲಿ ಅನ್ಯ ಧರ್ಮೀಯರ ಜೊತೆ ವ್ಯಾಪಾರ, ವಹಿವಾಟು ನಡೆಸದಂತೆ ಹಿಂದೂ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು ಅಭಿಯಾನ ನಡೆಸಿದರು.
ಹಿಂದೂಯೇತರರ ಬಳಿ ವ್ಯಾಪಾರ ಮಾಡದಂತೆ ಮಹಿಳಾ ಹಿಂದೂ ರಕ್ಷಣಾ ವೇದಿಕೆ ಸಂಘಟನೆಯ ನೇತೃತ್ವದಲ್ಲಿ ಮಹಿಳೆಯರು ವ್ಯಾಪಾರಸ್ಥರಿಗೆ ಮನವಿ ಮಾಡಿಕೊಂಡರು. ಈ ವೇಳೆ ಮಹಿಳೆಯರಿಗೆ ಅರಿಶಿನ, ಕುಂಕುಮ, ಹೂವು ಕೊಟ್ಟು, ಬಳೆ ತೊಡಿಸಿ ಹಿಂದೂ ಮಹಿಳಾ ಹೋರಾಟಗಾರರು ಮನವಿ ಮಾಡಿದರು.