ಕಲಬುರಗಿ:ಚಾಕುವಿನಿಂದ ಇರಿದು ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದ ಸಮಿಪ ಇರುವ ಖಾಸಗಿ ಆಸ್ಪತ್ರೆ ಎದುರು ನಡೆದಿದೆ. ಅನೀಲ್ ಭಜಂತ್ರಿ (24) ಕೊಲೆಯಾದ ಆಟೋ ಚಾಲಕ.
ಕಲಬುರಗಿಯಲ್ಲಿ ಚಾಕುವಿನಿಂದ ಇರಿದು ಆಟೋ ಚಾಲಕನ ಹತ್ಯೆ - ಕಲಬುರಗಿ ಕೊಲೆ ಪ್ರಕರಣ
ಹತ್ತರಿಂದ ಹದಿನೈದು ಮಂದಿಯಿದ್ದ ಯುವಕರ ಗುಂಪು ಚಾಕುವಿನಿಂದ ಇರಿದು ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
auto-driver-murdered-in-kalaburagi
ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿ ಆಗಿದ್ದಾರೆ. ಮೃತ ಅನೀಲ್ ಎಂಬಾತ ಕಲಬುರಗಿಯ ದುಬೈ ಕಾಲೋನಿ ನಿವಾಸಿಯಾಗಿದ್ದಾನೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದೆ.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.