ಕರ್ನಾಟಕ

karnataka

ETV Bharat / state

ಆಟೋ ಡ್ರೈವರ್​ ಕೊಲೆ ಪ್ರಕರಣ: ಆರೋಪಿಗಳ ಬಂಧನ - kalburgi latest news

ಇದೇ ತಿಂಗಳು 10 ರಂದು ಕಮಲಾಪೂರ ತಾಲೂಕಿನ ಕೊಟ್ಟರಗಿ ಗ್ರಾಮದ ಆಟೋ ಚಾಲಕ ಜಗನ್ನಾಥ ಎಂಬುವನನ್ನು ಕಲಬುರಗಿ ನಗರದ ಹೊರವಲಯದ ತಾಜ್ ಸುಲ್ತಾನಪುರ್ ಬಳಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

Auto driver murder case
ಆಟೋ ಡ್ರೈವರ್​ ಕೊಲೆ ಪ್ರಕರಣ

By

Published : Mar 14, 2021, 12:54 AM IST

ಕಲಬುರಗಿ: ಆಟೋ ಡ್ರೈವರ್​ ಕೊಲೆ ಪ್ರಕರಣದ ಆರೋಪಿಗಳು ಗ್ರಾಮೀಣ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಾಗರಾಜ್(21), ದತ್ತು (24) ಮತ್ತು ನಾಗರಾಜ್ ಅಂಬಲಗಿ (22) ಬಂಧಿತ ಆರೋಪಿಗಳು. ಇದೇ ತಿಂಗಳು 10 ರಂದು ಕಮಲಾಪೂರ ತಾಲೂಕಿನ ಕೊಟ್ಟರಗಿ ಗ್ರಾಮದ ಆಟೋ ಚಾಲಕ ಜಗನ್ನಾಥ ಎಂಬುವನನ್ನು ಕಲಬುರಗಿ ನಗರದ ಹೊರವಲಯದ ತಾಜ್ ಸುಲ್ತಾನಪುರ್ ಬಳಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ತನ್ನ ಸಹೋದರಿಯನ್ನು ಯಾಕೆ ಚುಡಾಯಿಸುತ್ತೀರಿ ಎಂದು ಕೇಳಿದಕ್ಕೆ ಆರೋಪಿಗಳು ಜಗನ್ನಾಥನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿದ ಪೊಲೀಸರು ಜೈಲಿಗೆ ಅಟ್ಟಿದ್ದಾರೆ‌ .

ABOUT THE AUTHOR

...view details