ಕಲಬುರಗಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ಧಿ ಹೇಳಿದ ಅಧಿಕಾರಿ ಮೇಲೆಯೇ ಜನರು ದೌರ್ಜನ್ಯ ಮೆರೆದಿರುವ ಘಟನೆ ನಗರದ ಖಾದ್ರಿ ಚೌಕ್ ಬಳಿ ನಡೆದಿದೆ.
ಕಲಬುರಗಿಯಲ್ಲೂ ಉದ್ಧಟತನ... ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಅಧಿಕಾರಿ ಮೇಲೆ ಹಲ್ಲೆಗೆ ಯತ್ನ!
ಖಾದ್ರಿ ಚೌಕ್ ಬಳಿ ಗುಂಪುಗುಂಪಾಗಿ ಸೇರಿದ್ದ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೋವಿಡ್-19 ವೀಕ್ಷಣಾಧಿಕಾರಿ ಬುದ್ಧಿ ಹೇಳಿದ್ದಕ್ಕೆ ಅವರ ಮೇಲೆಯೇ ಹಲ್ಲೆ ಯತ್ನ ನಡೆದಿದೆ. ವೀಕ್ಷಣಾಧಿಕಾರಿ ಮತ್ತು ಕಾರ್ ಚಾಲಕನ ಮೇಲೆಯೇ ಮುಗಿಬಿದ್ದು, ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾರೆ.
ಖಾದ್ರಿ ಚೌಕ್ ಬಳಿ ಗುಂಪು ಗುಂಪಾಗಿ ಸೇರಿದ್ದ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೋವಿಡ್-19 ವೀಕ್ಷಣಾಧಿಕಾರಿ ಬುದ್ಧಿ ಹೇಳಿದ್ದಾರೆ. ಆದರೆ ಇಲ್ಲಿನ ಜನರು ವೀಕ್ಷಣಾಧಿಕಾರಿ ಮತ್ತು ಕಾರ್ ಚಾಲಕನ ಮೇಲೆಯೇ ಮುಗಿಬಿದ್ದು, ಹಲ್ಲೆಗೆ ಯತ್ನಿಸಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಈಗಾಗಲೇ 44 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಐದು ಜನ ಮಹಾಮಾರಿ ಕೊರೊನಾ ರೋಗಕ್ಕೆ ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆ ರೆಡ್ ಝೋನ್ ಎಂದು ಘೋಷಿಸಲಾಗಿದೆ. ಆದರೂ ಇಲ್ಲಿನ ಕೆಲ ಜನರಿಗೆ ಬುದ್ಧಿ ಬರುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅನಾವಶ್ಯಕವಾಗಿ ಬೀದಿಯಲ್ಲಿ ಸೇರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.