ಕಲಬುರಗಿ: ಮೊನ್ನೆ ತಡರಾತ್ರಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸ್ಟೇಷನ್ ಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೋಜು ಮಸ್ತಿಗಾಗಿ ಎಟಿಎಂಗೆ ಕನ್ನ ಹಾಕಲು ಯತ್ನ: ಕಲಬುರಗಿಯಲ್ಲಿ ಸಿಕ್ಕಿಬಿದ್ದ ಖದೀಮ - ಎಟಿಎಂ ಒಡೆದು ಹಣ ದೋಚಲು ಯತ್ನಿಸಿ ವಿಫಲ
ಮೋಜು ಮಸ್ತಿಗಾಗಿ ಎಟಿಎಂನಲ್ಲಿ ಹಣ ಕದಿಯಲು ವಿಫಲ ಯತ್ನ ನಡೆಸಿ ಬಳಿಕ ತೆಲೆಮರೆಸಿಕೊಂಡಿದ್ದ ಆಸಾಮಿ ಸಿಕ್ಕಿಬಿದ್ದಿದ್ದಾನೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸರು ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಅರೋಪಿ ಹರಿಶ್ಚಂದ್ರ ರಾಥೋಡ್ ಬಂಧನ
ಜಿಲ್ಲೆಯ ಮುಗಳನಾಗಾವಿ ಗ್ರಾಮದ ನಿವಾಸಿ ಹರಿಶ್ಚಂದ್ರ ರಾಥೋಡ್ (22) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ ಹೊಸ ಜೇವರ್ಗಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಒಡೆದು ಹಣ ಕದಿಯಲು ಯತ್ನಿಸಿದ್ದ. ಈ ವೇಳೆ ವಿಫಲನಾದ ಬಳಿಕ ತಲೆಮರೆಸಿಕೊಂಡಿದ್ದ.
ಮೋಜು ಮಸ್ತಿಗಾಗಿ ಎಟಿಎಂ ಹಣ ಕದಿಯಲು ಹೋಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.