ಕಲಬುರಗಿ: ಜಿಲ್ಲೆಯ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದೆ. ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೇಂದ್ರದಿಂದ ನೆರವು: ಸಂಸದ ಉಮೇಶ್ ಜಾಧವ್ - kalaburagi esic
ನವದೆಹಲಿಯಲ್ಲಿ ಇಂದು ಇಎಸ್ಐಸಿ ವೈದ್ಯಕೀಯ ಆಯುಕ್ತರಾದ ಆರ್.ಕೆ. ಕಟಾರಿಯಾ ಅವರನ್ನು ಭೇಟಿ ಮಾಡಿ ಸಂಸದರು ಚರ್ಚಿಸಿದರು. ಇಂತಿಷ್ಟೇ ಬಜೆಟ್ ಎಂಬ ಮಿತಿಯೇ ಇಲ್ಲ. ಕಲಬುರಗಿ ಇಎಸ್ಐಸಿ ಎಷ್ಟು ಅನುದಾನವನ್ನು ಕೋರಿದೆಯೋ ಅಷ್ಟನ್ನೂ ಬಿಡುಗಡೆ ಮಾಡಲಾಗಿದೆ ಎಂದು ಆಯುಕ್ತ ಕಟಾರಿಯಾ ತಿಳಿಸಿರುವುದಾಗಿ ಸಂಸದರು ಹೇಳಿದ್ದಾರೆ.

ಇಎಸ್ಐಸಿಗೆ ಆರ್ಥಿಕ ಕೊರತೆಯುಂಟಾಗಿದೆ. ಕೇಂದ್ರದಿಂದ ಹಣಕಾಸಿನ ನೆರವು ಸಿಗುತ್ತಿಲ್ಲ ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದು ಜಾಧವ್ ಹೇಳಿದ್ರು. ಪ್ರಸಕ್ತ ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೇ ಮತ್ತಷ್ಟು ನೆರವು ನೀಡಲಿದೆ ಎಂದರು.