ಕರ್ನಾಟಕ

karnataka

ETV Bharat / state

ಸಾಧುವನ್ನು ಧರಧರನೆ ಎಳೆದೊಯ್ದು ಅಮಾನವೀಯವಾಗಿ ಹೊರಹಾಕಿದ ಟ್ರಸ್ಟ್ ಸಿಬ್ಬಂದಿ: ವಿಡಿಯೋ

ಯಾನಾಗುಂದಿ ಆಶ್ರಮದಲ್ಲಿದ್ದ ಸಾಧುವೊಬ್ಬ ರವಿವಾರ ರಾತ್ರಿ ಅಮ್ಮನ ಮಂದಿರದಲ್ಲಿ ಧ್ಯಾನ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಆಶ್ರಮದವರು ವಿರೋಧ ವ್ಯಕ್ತಪಡಿಸಿದ್ದು, ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದಾಗ ಆತನನ್ನು ಅಮಾನವೀಯವಾಗಿ ಎಳೆದೊಯ್ದು ಹೊರಹಾಕಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

assault on devotee in yanagundi Ashram
ಭಕ್ತನನ್ನು ಎಳೆದೊಯ್ದು ಹೊರಹಾಕಿದ ಯಾನಾಗುಂದಿ ಆಶ್ರಮ ಟ್ರಸ್ಟ್ ಸಿಬ್ಬಂದಿ

By

Published : Oct 18, 2021, 10:16 AM IST

ಸೇಡಂ: ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ತೆರಳಿದ ಸಾಧುವೊಬ್ಬರ ಮೇಲೆ ಆಶ್ರಮದ ಕೆಲವರು ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಹೊರಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಯಾನಾಗುಂದಿ ಆಶ್ರಮದಲ್ಲಿದ್ದ ಸಾಧುವೊಬ್ಬ ರವಿವಾರ ರಾತ್ರಿ ಅಮ್ಮನ ಮಂದಿರದಲ್ಲಿ ಧ್ಯಾನ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಆಶ್ರಮದವರು ವಿರೋಧ ವ್ಯಕ್ತಪಡಿಸಿದ್ದು, ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದಾಗ ಆತನನ್ನು ಅಮಾನವೀಯವಾಗಿ ಎಳೆದೊಯ್ದು ಹೊರಹಾಕಲಾಗಿದೆ ಎನ್ನಲಾಗಿದೆ. ಅಲ್ಲದೇ, ಕೆಲವರು ಕಾಲಿನಿಂದ ಒದ್ದು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸಾಧುವನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಸಾಧುವನ್ನು ಎಳೆದೊಯ್ದು ಹೊರಹಾಕಿದ ಯಾನಾಗುಂದಿ ಆಶ್ರಮ ಟ್ರಸ್ಟ್ ಸಿಬ್ಬಂದಿ

ಮಾತಾ ಮಾಣಿಕೇಶ್ವರಿ ಅಮ್ಮನವರು ಜೀವಂತವಾಗಿದ್ದಾಗಲೂ ಸಹ ಅಮ್ಮನವರ ದರ್ಶನಕ್ಕೆ ಅಲ್ಲಿನ ಟ್ರಸ್ಟ್ ನಿರ್ಬಂಧ ಹೇರಿತ್ತು. ಮಾಣಿಕೇಶ್ವರಿ ಅಮ್ಮ ಲಿಂಗೈಕ್ಯರಾದ ನಂತರವೂ ಸಹ ಅಮ್ಮನವರ ಗರ್ಭಗುಡಿ ದರ್ಶನಕ್ಕೆ ಅವಕಾಶ ಕಲ್ಪಿಸದ ಟ್ರಸ್ಟ್​ ಸದಸ್ಯರ ನಡೆಗೆ ಭಕ್ತರು, ಜನರು ರೋಸಿ ಹೋಗಿದ್ದಾರೆ. ಇದೀಗ ಹಲವು ವರ್ಷಗಳಿಂದ ಸೇವೆ ಮಾಡಿಕೊಂಡಿದ್ದ ಸಾಧುವಿನ ಮೇಲೆ ಹಲ್ಲೆ ನಡೆಸಿದ ಟ್ರಸ್ಟ್​ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ABOUT THE AUTHOR

...view details