ಕಲಬುರಗಿ:ಪುರಸಭೆ ಮುಖ್ಯಾಧಿಕಾರಿ ಮೇಲೆ ಪುರಸಭೆ ಸದಸ್ಯ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ಘಟನೆ ಚಿಂಚೋಳಿ ಪುರಸಭೆಯಲ್ಲಿ ನಡೆದಿದ್ದು, ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ : ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ - Municipal member Anandakumar Tiger
ಚಿಂಚೋಳಿ ಪುರಸಭೆ ಸದಸ್ಯ ಆನಂದಕುಮಾರ್ ಟೈಗರ್ ಹಾಗೂ ಆತನ ಸಹಚರರು ಮಂಗಳವಾರ ಮಧ್ಯಾಹ್ನ 3-30 ರ ಸುಮಾರಿಗೆ ಕಚೇರಿಯಲ್ಲಿಯೇ ಮುಖ್ಯಾಧಿಕಾರಿ ಅಭಯಕುಮಾರ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುರಸಭೆ ಸದಸ್ಯ ಆನಂದಕುಮಾರ್ ಟೈಗರ್ ಹಾಗೂ ಆತನ ಸಹಚರರು ಮಂಗಳವಾರ ಮಧ್ಯಾಹ್ನ 3-30 ರ ಸುಮಾರಿಗೆ ಕಚೇರಿಯಲ್ಲಿಯೇ ಮುಖ್ಯಾಧಿಕಾರಿ ಅಭಯಕುಮಾರ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುರಸಭೆ ಕಚೇರಿಗೆ ನಕಲಿ ಬಿಲ್‌ಗಳನ್ನು ತಂದಿದ್ದ ಆನಂದ ಕುಮಾರ್ ಚೆಕ್ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೊಪ್ಪದೆ ಇದ್ದಾಗ ನನ್ನ ಮೇಲೆ ಹಲ್ಲೆ ಮಾಡಿ ನೆಲಕ್ಕೆ ಹಾಕಿ ಒದ್ದಿದ್ದಾರೆ ಎಂದು ಆನಂದ ಕುಮಾರ ಹಾಗೂ ಆತನ ಸಹಚರರ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಮುಖ್ಯಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಇತ್ತ ಆನಂದ ಕುಮಾರ ಕೂಡಾ ಮುಖ್ಯಾಧಿಕಾರಿಗಳಾದ ಅಭಯ ಕುಮಾರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾನೆ. ಮೂರ್ನಾಲ್ಕು ತಿಂಗಳಿಂದ ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಪಾವತಿಸಿಲ್ಲ. ಕೇಳಲು ಹೋದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.