ಕರ್ನಾಟಕ

karnataka

ETV Bharat / state

ಆಶಾ ಕಾರ್ಯಕರ್ತೆಯ ಪಾದ ಪೂಜೆ ಮಾಡಿ ಗೌರವಿಸಿದ ಯುವಕ! - kalburgi latest asha worker news

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಯುವಕ ವಿಜಯಕುಮಾರ ಜಿಡಗಿ ಆಶಾ ಕಾರ್ಯಕರ್ತೆಯರ ಪಾದ ತೊಳೆದು ಮಾದರಿಯಾಗಿದ್ದಾನೆ. ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕುತ್ತ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯ ಪಾದ ಪೂಜೆ ಮಾಡಿ ಮಾದರಿಯಾಗಿದ್ದಾನೆ.

worships-an-activists-foot
ಆಶಾ ಕಾರ್ಯಕರ್ತೆಯ ಪಾದ ಪೂಜೆ

By

Published : Apr 26, 2020, 7:11 PM IST

ಕಲಬುರಗಿ: ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ರಾಜ್ಯದ ಹಲವೆಡೆ ಹಲ್ಲೆ ನಡೆಯುತ್ತಿವೆ. ಆದ್ರೆ ಇಲ್ಲೊಬ್ಬ ಯುವಕ ಆಶಾ ಕಾರ್ಯಕರ್ತೆಯ ಪಾದ ಪೂಜೆ ಮಾಡಿ ಗೌರವಿಸಿದ್ದಾನೆ.

ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಯುವಕ ವಿಜಯಕುಮಾರ ಜಿಡಗಿ ಆಶಾ ಕಾರ್ಯಕರ್ತೆಯ ಪಾದ ತೊಳೆದು ಗೌರವಿಸಿದ್ದಾನೆ. ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕುತ್ತ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯ ಪಾದ ಪೂಜೆ ಮಾಡಿ ಮಾದರಿಯಾಗಿದ್ದಾನೆ.

ಆಶಾ ಕಾರ್ಯಕರ್ತೆಯ ಪಾದ ಪೂಜೆ

ಕೊರೊನಾ ಕುರಿತಾಗಿ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತೆ ಚಂದ್ರಭಾಗ ಎನ್ನುವವರು ವಿಜಯಕುಮಾರ್ ಅವರ ಮನೆಗೆ ತೆರಳಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯನ್ನು ಆತ್ಮೀಯವಾಗಿ ಬರ ಮಾಡಿಕೊಂಡ ವಿಜಯಕುಮಾರ್, ಸ್ಯಾನಿಟೈಸರ್​ನಿಂದ ತಮ್ಮ ಕೈ ತೊಳೆದುಕೊಂಡು ನಂತರ ಆಶಾ ಕಾರ್ಯಕರ್ತೆಯ ಪಾದಪೂಜೆ ಮಾಡಿದ್ದಾನೆ.

ABOUT THE AUTHOR

...view details